ಅಡುಗೆಮನೆ ಡಸ್ಟ್‌ಬಿನ್‌ನ ಕೆಟ್ಟವಾಸನೆ ತಡೆಯಲು ಈ ಟಿಪ್ಸ್ ವರ್ಕೌಟ್ ಆಗುತ್ತೆ ನೋಡಿ
By Jayaraj Sep 09, 2024
Hindustan Times Kannada
ಮನೆಯ ಕಸದ ಬುಟ್ಟಿ ಹೆಚ್ಚು ದಿನ ಸ್ವಚ್ಛಗೊಳಿಸದಿದ್ದರೆ ವಾಸನೆ ಬರುತ್ತದೆ. ಇದರಿಂದ ಮನೆಯ ಆರೋಗ್ಯಕರ ವಾತಾವರಣಕ್ಕೆ ಧಕ್ಕೆಯಾಗುತ್ತದೆ.
ನಿಮ್ಮ ಮನೆಯ ಡಸ್ಟ್‌ಬಿನ್‌ನಿಂದ ತುಂಬಾ ದುರ್ವಾಸನೆ ಬರುತ್ತಿದ್ದರೆ, ಈ ಸುಲಭ ತಂತ್ರಗಳಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ನಿಂಬೆ ಮತ್ತು ಕಿತ್ತಳೆಯಂಥ ಸಿಟ್ರಸ್ ಹಣ್ಣುಗಳ ಸಿಪ್ಪೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ. ಆ ಬಿಸಿ ನೀರಿನಿಂದ ಅಡುಗೆ ಮನೆಯ ಡಸ್ಟ್‌ಬಿನ್ ಸ್ವಚ್ಛಗೊಳಿಸಿ. ಇದು ಡಸ್ಟ್‌ಬಿನ್‌ನ ವಾಸನೆಯನ್ನು ಹೋಗಲಾಡಿಸುತ್ತದೆ.
ಬೇಕಿಂಗ್ ಸೋಡಾ ಡಸ್ಟ್‌ಬಿನ್‌ನ ವಾಸನೆಯನ್ನು ತೆಗೆದುಹಾಕಲು ಉತ್ತಮ ಪದಾರ್ಥ. ಸ್ವಲ್ಪ ಅಡಿಗೆ ಸೋಡಾವನ್ನು ಡಸ್ಟ್‌ಬಿನ್‌ನಲ್ಲಿ ಹಾಕಿದ ನಂತರ ಅದರಲ್ಲಿ ಕಸ ಹಾಕಲು ಶುರುಮಾಡಿ.
ಸಾರಭೂತ ತೈಲದ ಹನಿಗಳಿಂದ ಡಸ್ಟ್‌ಬಿನ್ ವಾಸನೆ ತೆಗೆದುಹಾಕಬಹುದು. ಡಸ್ಟ್‌ಬಿನ್ ಸ್ವಚ್ಛಗೊಳಿಸುವಾಗ ನೀರಿಗೆ ಎಸೆನ್ಷಿಯಲ್ ಆಯಿಲ್ ಮಿಶ್ರಣ ಮಾಡಿ.
ನೀರಿಗೆ ಬ್ಲೀಚ್ ಮಿಶ್ರಣ ಮಾಡಿ ಡಸ್ಟ್‌ಬಿನ್ ಸ್ವಚ್ಛಗೊಳಿಸಿದರೆ ವಾಸನೆ ಸಂಪೂರ್ಣವಾಗಿ ಹೋಗುತ್ತದೆ. ಅರ್ಧ ಸ್ಪೂನ್ ಬ್ಲೀಚ್ ಅನ್ನು ನೀರಿಗೆ ಬೆರೆಸಿ ಡಸ್ಟ್ ಬಿನ್‌ಗೆ ಹಾಕಿ ನಂತರ ನೀರಿನಿಂದ ತೊಳೆಯಿರಿ.
ಕಸ ಡಸ್ಟ್‌ಬಿನ್‌ಗೆ ಹಾಕುವ ಮೊದಲು ಬ್ಲೀಚಿಂಗ್ ಪೌಡರ್ ಸಿಂಪಡಿಸಿ. ಇದರೊಂದಿಗೆ, ಡಸ್ಟ್‌ಬಿನ್‌ನ ವಾಸನೆಯು ಕೆಲವೇ ಗಂಟೆಗಳಲ್ಲಿ ಹೋಗುತ್ತದೆ.
ಡಸ್ಟ್‌ಬಿನ್‌ನಿಂದ ತೇವಾಂಶ ಮತ್ತು ವಾಸನೆ ತೆಗೆದುಹಾಕಲು ಕ್ಯಾಟ್ ಲಿಟ್ಟರ್ ಬಳಸಬಹುದು. ಮಾರುಕಟ್ಟೆಯಲ್ಲಿ ಇದು ದೊರೆಯುತ್ತದೆ.
ಕಸದ ಬುಟ್ಟಿಯನ್ನು ದೀರ್ಘಕಾಲದವರೆಗೆ ಸ್ವಚ್ಛಗೊಳಿಸದಿದ್ದರೆ, ಅದು ವಾಸನೆ ಬರುತ್ತದೆ. ಹೀಗಾಗಿ ವಾರಕ್ಕೆ ಕನಿಷ್ಠ 2-3 ಬಾರಿ ಡಸ್ಟ್‌ಬಿನ್ ಸ್ವಚ್ಛಗೊಳಿಸಿ. ಇದರಿಂದ ವಾಸನೆಯ ಸಮಸ್ಯೆ ಇರುವುದಿಲ್ಲ.