ನಿನ್ನ ತೋಳಲ್ಲಿ ನಾನು ಸುರಕ್ಷಿತವೆಂದು ಸಂಗಾತಿ ಹೇಳಬೇಂಕಂದ್ರೆ ನೀವು ಹೀಗಿರಬೇಕು
By Jayaraj
Sep 14, 2024
Hindustan Times
Kannada
ಆರೋಗ್ಯಕರ ದಾಂಪತ್ಯದಲ್ಲಿ ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಇರಬೇಕು. ಸಂಬಂಧದಲ್ಲಿ ತಾನು ಸುರಕ್ಷಿತ ಎಂಬ ಭಾವನೆ ಬಂದಾಗ ಆ ಜೋಡಿ ಖುಷಿಯಾಗಿರಲು ಸಾಧ್ಯ.
ಉತ್ತಮ ಕೇಳುಗನಾಗಿ. ಸಂಗಾತಿಯ ಮಾತನ್ನು ಆಲಿಸುವ ತಾಳ್ಮೆ ಇರಲಿ. ಅಷ್ಟೇ ಅಲ್ಲದೆ ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಿ.
ಸಂಗಾತಿ ಆರಾಮದಾಯಕವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಕಂಫರ್ಟ್ ಜೋನ್‌ನಲ್ಲಿ ಇರುವ ಭಾವನೆ ಅವರಲ್ಲಿರಲಿ.
ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಸೃಷ್ಟಿಸಿ. ಯಾವುದಕ್ಕೂ ಮುಜುಗರ, ಹಿಂದೇಟು ಹಾಕದಂತೆ ನೋಡಿಕೊಳ್ಳಿ.
ಸಂಗಾತಿಯ ಸಂಕಷ್ಟದ ಸಮಯದಲ್ಲಿ ಸಾಂತ್ವನ ಹೇಳಿ. ನಿನ್ನೊಂದಿಗೆ ನಾನಿದ್ದೇನೆ ಎಂದು ಹೇಳಿ.
ಸಂಗಾತಿಗೆ ನಿಮ್ಮ ಅಗತ್ಯವಿದ್ದಾಗ ಅವರ ಜೊತೆಗಿರಿ. ಅವರಿಗಾಗಿ ಸಮಯ ಕೊಡಿ. ನಿಮ್ಮ ಉಪಸ್ಥಿತಿಯೇ ಸಂಗಾತಿ ಬಯಸುವ ದುಬಾರಿ ಗಿಫ್ಟ್.
ಸಂಗಾತಿಯ ಆಯ್ಕೆ ಹಾಗೂ ನಿರ್ಧಾರಗಳನ್ನು ಗೌರವಿಸಿ. ಅವರ ವೈಯಕ್ತಿಕ ಹಿತಾಸಕ್ತಿಗಳಿಗೆ ಬೆಂಬಲ ಸೂಚಿಸಿ.
ಸಂಗಾತಿ ಯಾವ ವಿಷಯಗಳಿಗೆ ಭಯಪಡುತ್ತಾರೋ ಅದರಿಂದ ದೂರವಿರಿ.
All photos: Pexels
ನಿರುದ್ಯೋಗಿ ಆಗಿದ್ರೂ ಪರ್ಸನಲ್ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ...
Pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ