ಆಲ್ಟೊ ಕೆ10 ಬೇಸ್ ಮಾಡೆಲ್ ಹೇಗಿದೆ?
By Jayaraj
Nov 13, 2024
Hindustan Times
Kannada
ಮಾರುತಿ ಆಲ್ಟೊ ಕೆ10 ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಡಿಮೆ ಬೆಲೆಯ ಕಾರುಗಳಲ್ಲಿ ಒಂದಾಗಿದೆ.
ಇಂದು ನಾವು Alto K10ನ ಮೂಲ ಮಾದರಿಯಲ್ಲಿ (Alto K10 Std) ಏನೇನು ಲಭ್ಯವಿದೆ ಎಂಬುದರ ಕುರಿತು ತಿಳಿಯೋಣ
ಈ ಕಾರು 3,530 ಎಂಎಂ ಉದ್ದ, 1,490 ಎಂಎಂ ಅಗಲ ಮತ್ತು 1,520 ಎಂಎಂ ಎತ್ತರವಿದೆ. ಬೇಸ್ ಮಾಡೆಲ್‌ನಲ್ಲಿ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಷನ್ ನೀಡಲಾಗಿದೆ.
ಮೂಲ ಮಾದರಿಯಲ್ಲಿ, ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಅದರ ಬಾಡಿ ಬಣ್ಣದಲ್ಲಿ ಬರುವುದಿಲ್ಲ. ORVM ಅನ್ನು ಕೈಯಿಂದಲೇ ಸರಿಹೊಂದಿಸಬೇಕಾಗುತ್ತದೆ.
ಮುಂಭಾಗದಲ್ಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಡ್ಯುಯಲ್ ವೈಪರ್ ಮತ್ತು ಸಿಂಗಲ್ ವಾಷರ್ ಇದೆ.
ಮಾರುತಿ ಆಲ್ಟೊ ಕೆ10 ಮೂಲ ಮಾದರಿಯಲ್ಲಿ ಪವರ್ ವಿಂಡೋ ಒದಗಿಸಲಾಗಿಲ್ಲ. ಆದರೆ, ಬಾಟಲಿ ಹೋಲ್ಡರ್ ಮುಂಭಾಗದ ಸೀಟಿನಲ್ಲಿ ಲಭ್ಯವಿರುತ್ತದೆ.
Alto K10 ಮೂಲ ಮಾದರಿಯಲ್ಲಿ 998ccಯ 1.0 ಲೀಟರ್ K10C DualJet ಪೆಟ್ರೋಲ್ ಎಂಜಿನ್ ಇದೆ.
ಈ ಕಾರು ಡಿಜಿಟಲ್ ಸ್ಪೀಡೋಮೀಟರ್ ಮತ್ತು 27 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಇದು 24.7 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
ಟೈರ್ ಗಾತ್ರ 145/80 R12 ಮತ್ತು ಬೂಟ್ ಸ್ಪೇಸ್ 214 ಲೀಟರ್. ಸುರಕ್ಷತೆ ದೃಷ್ಟಿಯಿಂದ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಡ್ರೈವರ್ ಏರ್‌ಬ್ಯಾಗ್ ಲಭ್ಯವಿದೆ.
ಕಾರಿನಲ್ಲಿ ಏರ್ ಕಂಡಿಷನರ್ ಕೂಡ ಇದೆ. ಈ ಕಾರು ರೂ 3,99,000 (ದೆಹಲಿ ಎಕ್ಸ್ ಶೋ ರೂಂ) ಬೆಲೆಗೆ ಲಭ್ಯವಿದೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ