ವೈರ್ ಏನಾದರೂ ತುಂಡಾದರೆ ಭಾರಿ ನಷ್ಟ. ಹೀಗಾಗಿ ಇಲಿಗಳನ್ನು ಹೊರಗೆ ಓಡಿಸುವುದೇ ಒಂದು ಸವಾಲು.
ಇಲಿಗಳನ್ನು ಹಿಡಿಯಲು ಉತ್ತಮ ಮಾರ್ಗವೆಂದರೆ ಇಲಿಯ ಪಂಜರವನ್ನು ಬಳಸುವುದು. ಇಲಿ ಹಿಡಿಯುವ ಪ್ಯಾಡ್ ಕೂಡಾ ಬಳಸಬಹುದು.
ಇದರ ಹೊರತಾಗಿ ಕಾರಿನ ಒಳಗಿನಿಂದ ಇಲಿಗಳನ್ನು ಓಡಿಸಲು ನೀವು ನಾಫ್ಥಲೀನ್ ಬಾಲ್ಸ್ ಬಳಸಬಹುದು.
ಇಲಿಗಳು ಇಂಜಿನ್‌ನಲ್ಲಿನ ರಂಧ್ರದ ಮೂಲಕ ಮತ್ತು ಡ್ಯಾಶ್‌ಬೋರ್ಡ್ ಮೂಲಕ ಕಾರಿನ ಒಳಭಾಗಕ್ಕೆ ನುಸುಳುತ್ತವೆ. ಇದಕ್ಕೆ ಎಂಜಿನ್ ಪ್ರದೇಶದ ಮೇಲೆ ಫಿನೈಲ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಬೇಕು.
ತಂಬಾಕು ಎಲೆಗಳ ವಾಸನೆಗೆ ಇಲಿಗಳು ಓಡುತ್ತವೆ. ಹೀಗಾಗಿ ಆ ಎಲೆಗಳನ್ನು ಕಾರಿನ ಡ್ಯಾಶ್‌ಬೋರ್ಡ್ ಮತ್ತು ಎಂಜಿನ್ ಭಾಗದಲ್ಲಿ ಇರಿಸಿ.
ಇಲಿ ಓಡಿಸುವ ಸ್ಪ್ರೇ (rat repellent spray) ಕೂಡಾ ಬಳಸಬಹುದು. ನೀವು ಇದನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದು.
ಇಲಿಗಳು ಕಾರಿನೊಳಗೆ ಬರದಂತೆ ತಡೆಯಲು, ಕಾರಿನಲ್ಲಿ ಆಹಾರ ಪದಾರ್ಥಗಳನ್ನು ಇಡುವುದನ್ನು ತಪ್ಪಿಸಿ.
ಇಲಿಗಳು ಕೊಳಕಿನತ್ತ ಆಕರ್ಷಿತವಾಗುತ್ತವೆ. ಹೀಗಾಗಿ ಕಾರಿನ ಒಳಭಾಗವನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಡಿ. ಆಗ ಇಲಿಗಳು ಬರುವುದಿಲ್ಲ.