ನಿಮ್ಮ ಕಣ್ಣುಗಳನ್ನು ಕಾಪಾಡುವ ಐಫೋನ್ ಫೀಚರ್ಸ್

By Jayaraj
Nov 13, 2024

Hindustan Times
Kannada

ಗಂಟೆಗಳ ಕಾಲ ನಿರಂತರವಾಗಿ ಫೋನ್ ಬಳಸುವ ಅಭ್ಯಾಸ ಕೆಲವರಿಗಿದೆ. ಅಂತಹವರಿಗೆ ಕಣ್ಣಿನ ಕಿರಿಕಿರಿಯಂತಹ ಸಮಸ್ಯೆ ಎದುರಾಗುತ್ತದೆ. 

ಮೊಬೈಲ್‌ನಲ್ಲಿ ನಿರಂತರವಾಗಿ ವಿಡಿಯೋ ಗೇಮ್ ಆಡುವ ಮಕ್ಕಳಲ್ಲಿ ಸಮೀಪ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ನೀವು ಐಫೋನ್ ಬಳಕೆದಾರರಾಗಿದ್ದರೆ, ನಿಮ್ಮ ಕಣ್ಣುಗಳನ್ನು ಹಾನಿಯಿಂದ ರಕ್ಷಿಸುವ ವೈಶಿಷ್ಟ್ಯಗಳಿವೆ.

ಈ ವೈಶಿಷ್ಟ್ಯದ ಹೆಸರು Screen Distance. ಅದನ್ನು ಆನ್ ಮಾಡಿದರೆ ನಿಮ್ಮ ಕಣ್ಣುಗಳಿಗೆ ಯಾವುದೇ ಹಾನಿ ಆಗುವುದಿಲ್ಲ.

ಈ ವೈಶಿಷ್ಟ್ಯವು ಕಣ್ಣುಗಳು ಮತ್ತು ಫೋನ್ ಸ್ಕ್ರೀನ್ ನಡುವಿನ ಅಂತರವನ್ನು ನಿರ್ವಹಿಸುತ್ತದೆ. ಬಳಕೆದಾರರು ಸ್ಕ್ರೀನ್‌ ಅನ್ನು ಹತ್ತಿರದಿಂದ ನೋಡಿದರೆ ಫೋನ್ ಲಾಕ್ ಆಗುತ್ತದೆ.

ಫೋನ್ ಬಳಸುವಾಗ ಅದನ್ನು 12 ಇಂಚು ಅಥವಾ 30 ಸೆಂಟಿಮೀಟರ್ ದೂರದಲ್ಲಿ ನೋಡಲು ಆಪಲ್ ಬಳಕೆದಾರರಿಗೆ ಸಲಹೆ ನೀಡುತ್ತದೆ.

ಐಫೋನ್‌ Setting ಆಯ್ಕೆಗೆ ಹೋಗಿ ಮತ್ತು ನಂತರ Screen Time ಆಯ್ಕೆಯನ್ನು ಟ್ಯಾಪ್ ಮಾಡಿ.

ಇಲ್ಲಿ Screen Distance ಆಯ್ಕೆ ಟ್ಯಾಪ್ ಮಾಡುವ ಮೂಲಕ ನೀವು ಅದನ್ನು ಸಕ್ರಿಯಗೊಳಿಸಬಹುದು.

ಈ ರೀತಿ Screen Distance ವೈಶಿಷ್ಟ್ಯವು ಆನ್ ಆಗುತ್ತದೆ. ನೀವು ಈ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಬಹುದು. ಈ ವೈಶಿಷ್ಟ್ಯವು iOS17 ಮತ್ತು iOS18ನಲ್ಲಿದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ