ಅಕ್ಟೋಬರ್ ತಿಂಗಳ ಪ್ರವಾಸದ ವೇಳೆ ನಿಮ್ಮಲ್ಲಿ ಇರಲೇಬೇಕಾದ ವಸ್ತುಗಳಿವು

By Jayaraj
Sep 23, 2024

Hindustan Times
Kannada

ಅಕ್ಟೋಬರ್‌ ರಜೆಯಲ್ಲಿ ಭಾರತದ ವಿವಿಧ ಭಾಗಗಳಿಗೆ ಪ್ರವಾಸ ಯೋಜನೆ ಹಾಕಿದ್ದರೆ, ಕೆಲವೊಂದು ವಸ್ತುಗಳು ನಿಮ್ಮ ಬಳಿ ಇದ್ದರೆ ಚೆನ್ನ.

ಅಕ್ಟೋಬರ್‌ ತಿಂಗಳಲ್ಲಿ ಬಿಸಿಲು ಹಾಗೂ ಮಳೆ ಎರಡೂ ಇರುತ್ತದೆ. ಸಮತೋಲಿತ ವಾತಾವರಣಕ್ಕೆ ತಕ್ಕನಾಗಿ ಸಿದ್ಧತೆ ನಿಮ್ಮಲ್ಲಿರಲಿ.

ಮಳೆ ಬಂದರೆ ಒದ್ದೆಯಾಗದಂತೆ ಕೊಡೆ, ರೈನ್‌ ಕೋಟ್‌ ಬ್ಯಾಗ್‌ನಲ್ಲಿರಲಿ. 

ಅಕ್ಟೋಬರ್‌ನಲ್ಲಿ ಮಳೆಯೂ ಬೀಳಬಹುದು. ಜೊತೆಗೆ ಇರುತ್ತದೆ. ಹೆಚ್ಚು ಭಾರವಲ್ಲದ ಲಘು ಬಟ್ಟೆ ದೇಹಕ್ಕೆ ಒಳ್ಳೆಯದು. ಜೊತೆಗೆ ಮಳೆಯಾದರೆ ಬೇಗನೆ ಒಣಗುತ್ತದೆ.

ಹೊರಗೆ ಓಡಾಡುವಾಗ ಶೂಗಳಿಗಿಂತ ಸ್ಲಿಪ್ಪರ್‌ ಉತ್ತಮ. ಮಳೆ ಬಿದ್ದರೂ ಅವುಗಳಿಗೆ ಸಮಸ್ಯೆ ಆಗುವುದಿಲ್ಲ. ಶೂಗಳೇ ಬೇಕು ಎಂದರೆ ಆರಾಮದಾಯಕ ಬೂಟುಗಳನ್ನು ಧರಿಸಿ.

ಸನ್‌ಸ್ಕ್ರೀನ್‌ ಮತ್ತು ಮಾಯಿಶ್ಚರೈಸರ್‌ ಇಟ್ಟುಕೊಂಡಿರಿ. ನಿಮ್ಮ ಪ್ರವಾಸದ ಸ್ಥಳದಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಮುಖಕ್ಕೆ ಹಚ್ಚಬಹುದು.

ಲೈಸನ್ಸ್‌, ಐಡಿ ಪ್ರೂಫ್‌, ಸೇರಿದಂತೆ ನಿಮ್ಮ ಪ್ರವಾಸಿ ಸ್ತಳಕ್ಕೆ ಅನುಗುಣವಾಗಿ ಅಗತ್ಯ ದಾಖಲೆಗಳನ್ನು ಒಟ್ಟಿಗೆ  ಇಟ್ಟುಕೊಳ್ಳಿ.

ನೀವು ಹೋಗುವ ಎಲ್ಲಾ ಕಡೆ ಸಾಬೂನು ಮತ್ತು ನೀರು ಸಿಗದಿರಬಹುದು. ಹೀಗಾಗಿ ಆರೋಗ್ಯ ಕಾಳಜಿಗಾಗಿ ಜೊತೆಗೆ ಸ್ಯಾನಿಟೈಸರ್ ಇಟ್ಟುಕೊಳ್ಳಿ.

ನೀರಿನ ಬಾಟಲಿ ಅಗತ್ಯ. ಹೆಚ್ಚು ಮಳೆಯಾಗದ ಸಮಯದಲ್ಲಿ ಬಾಯಾರಿಕೆ ಹೆಚ್ಚು. ಅಲ್ಲದೆ ದೇಹವನ್ನು ಹೈಡ್ರೀಕರಿಸುವ ಸಲುವಾಗಿ ನೀರು  ಬೇಕು.

ಮೊಬೈಲ್‌ ಚಾರ್ಜಿಂಗ್‌ಗೆ ಅಗತ್ಯವಾಗಿರುವ ಪವರ್ ಬ್ಯಾಂಕ್ ಜೊತೆಗಿರಲಿ.

ಸನ್‌ಗ್ಲಾಸ್‌ ಕೊಂಡೊಯ್ಯಿರಿ. ಉತ್ತರ ಭಾರತದ ತಂಪಾದ ರಾಜ್ಯಗಳ ಹೊರತಾಗಿ ಹೆಚ್ಚು ಬಿಸಿಲಿರುವ ಪ್ರದೇಶಗಳಿಗೆ ಹೋಗುವಾಗ ಜೊತೆಗೆ ಸನ್‌ಗ್ಲಾಸ್‌ ಕೊಂಡೊಯ್ಯಿರಿ.

All photos: Pexels

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?