ನೀವು ಈ 7 ಅಭ್ಯಾಸ ಬದಲಿಸಿಕೊಂಡ್ರೆ ದಪ್ಪ ಅಂತ ಕೊರಗೋ ಪರಿಸ್ಥಿತಿ ಬರಲ್ಲ
By Jayaraj Sep 07, 2024
Hindustan Times Kannada
ಆಧುನಿಕ ಜೀವನಶೈಲಿಯಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆ ಅನುಭವಿಸುತ್ತಿದ್ದಾರೆ. ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ತಪ್ಪಾದ ಆಹಾರಕ್ರಮ ಮತ್ತು ದಿನಚರಿಯಲ್ಲಿ ವ್ಯತ್ಯಾಸ.
ತೂಕ ಹೆಚ್ಚಲು ಬೆಳಗ್ಗಿನ ಕೆಲವೊಂದು ಅಭ್ಯಾಸಗಳು ಪ್ರಮುಖ ಕಾರಣ. ನೀವು ಈ ಅಭ್ಯಾಸಗಳನ್ನು ಸುಧಾರಿಸಿದರೆ ತೂಕವನ್ನು ನಿಯಂತ್ರಿಸಬಹುದು.
ಅನೇಕ ಜನರು ಬೆಳಿಗ್ಗೆ ತಡವಾಗಿ ಎದ್ದು ಉಪಾಹಾರ ಸ್ಕಿಪ್ ಮಾಡ್ತಾರೆ. ಹೀಗಾಗಿ ಮಧ್ಯಾಹ್ನ ಹಸಿವು ಹೆಚ್ಚುತ್ತದೆ. ಹೀಗಾಗಿ ಅತಿಯಾಗಿ ತಿನ್ನುತ್ತಾರೆ. ಸಹಜವಾಗಿ ತೂಕ ಹೆಚ್ಚಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ, ಹಲವರು ನೀರಿನ ಬದಲಿಗೆ ಬೇರೆ ಪಾನೀಯ ಕುಡಿಯುತ್ತಾರೆ. ಪ್ರತಿದಿನ ಚಹಾ, ಕಾಫಿ ಅಥವಾ ಇತರ ಪಾನೀಯಗಳನ್ನು ಸೇವಿಸಿದರೆ ಅದರಲ್ಲಿ ಭಾರಿ ಪ್ರಮಾಣದ ಸಕ್ಕರೆ ಇರುತ್ತದೆ. ತೂಕ ವೇಗವಾಗಿ ಹೆಚ್ಚಾಗುತ್ತದೆ.
ಬೆಳಗ್ಗೆ ಎದ್ದು ನೀರು ಕುಡಿಯದಿರುವ ಅಭ್ಯಾಸದಿಂದ ಹಸಿವು ಹೆಚ್ಚಾಗಬಹುದು. ಇದು ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರು ಕುಡಿದರೆ ಫಿಟ್ ಆಗಿರುತ್ತೀರಿ.
ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ ಅಂಶವಿರುವ ಆಹಾರವನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಿದರೆ, ಇದು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿರಬಹುದು.
ಉಪಾಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಇರುವ ಆಹಾರಗಳ ಬದಲಿಗೆ ಜಂಕ್ ಫುಡ್ ತಿಂದರೂ ತೂಕ ಬೇಗನೆ ಹೆಚ್ಚಾಗುತ್ತದೆ.
ತಡವಾಗಿ ಮಲಗುವ ಅಭ್ಯಾಸದಿಂದ ನಿದ್ರೆ ಸಮಯಕ್ಕೆ ಭಂಗವಾಗುತ್ತದೆ. ಅಲ್ಲದೆ ಆಹಾರ ಕ್ರಮವೂ ಬದಲಾಗುತ್ತದೆ. ಹೀಗಾಗಿ ದೇಹದ ಚಯಾಪಚಯ ಸಾಮರ್ಥ್ಯ ಕಡಿಮೆಯಾಗಿ ತ್ವರಿತವಾಗಿ ತೂಕ ಹೆಚ್ಚಲು ಕಾರಣವಾಗುತ್ತದೆ.
ಬೆಳಿಗ್ಗೆ ತಡವಾಗಿ ಏಳುವುದು, ವ್ಯಾಯಾಮ ಅಥವಾ ಯೋಗ ಮಾಡದಿರುವುದು ಕೂಡಾ ತೂಕ ಹೆಚ್ಚಳದೊಂದಿಗೆ ಸಂಬಂಧ ಹೊಂದಿದೆ
All Photos: Pexels
ಕೂದಲು ಅತಿ ತೆಳ್ಳಗಿದ್ರೆ ಈ ಮನೆಮದ್ದು ಟ್ರೈ ಮಾಡಿ, ಕೆಲವೇ ದಿನಗಳಲ್ಲಿ ದಟ್ಟವಾಗಿ ಬೆಳೆಯುತ್ತೆ