ಮರಗಳ ಮೇಲೆಯೇ ಮಲಗಿದರೂ ಪಕ್ಷಿಗಳು ಕೆಳಗೆ ಬೀಳುವುದಿಲ್ಲ ಏಕೆ?
By Jayaraj Sep 17, 2024
Hindustan Times Kannada
ನಾವೇನಾದರೂ ಗಾಢ ನಿದ್ದೆಯಲ್ಲಿದ್ದರೆ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತೇವೆ. ಕೆಲವೊಬ್ಬರು ನಿದ್ದೆ ವೇಳೆ ಮಂಚದಿಂದ ಕೆಳಗೆ ಬೀಳುತ್ತಾರೆ.
ಚಾಪೆ ಅಥವಾ ನೆಲದ ಮೇಲೆ ಹಾಸಿಗೆ ಹಾಸಿ ಮಲಗಿದರೂ, ಎಚ್ಚರವಾದ ಸಮಯದಲ್ಲಿ ಕೆಳಗಿರುತ್ತಾರೆ. ಆದರೆ ಮರದ ಕೊಂಬೆಗಳ ಮೇಲೆ ಎತ್ತರದಲ್ಲಿ ಮಲಗುವ ಪಕ್ಷಿಗಳು ಮಾತ್ರ ಕೆಳಗೆ ಬೀಳಲ್ಲ.
ಹಾಗಿದ್ದರೆ ಮರದ ಕೊಂಬೆ ಮೇಲೆ ಮಲಗುವ ಪಕ್ಷಿಗಳು ತನ್ನ ಪುಟ್ಟ ದೇಹದ ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುತ್ತವೆ ಎಂದು ನೀವೇನಾದರೂ ಯೋಚಿಸಿದ್ದೀರಾ?
ಪಕ್ಷಿಗಳು ಒಂದು ಕಣ್ಣು ತೆರೆದು ಕೂಡಾ ಮಲಗುತ್ತವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅಲ್ಲದೆ ನಿದ್ದೆ ವೇಳೆ ಪಕ್ಷಿಗಳ ಮೆದುಳಿನ ಒಂದು ಭಾಗ ಸಕ್ರಿಯವಾಗಿರುತ್ತದೆ.
ನೀವೇನಾದರೂ ಮಲಗಿರುವ ಪಕ್ಷಿಯನ್ನು ನೋಡಿದ್ದರೆ, ಅದರ ಒಂದು ಕಣ್ಣು ತೆರೆದಿರುತ್ತದೆ. ಆದರೆ ಪಕ್ಷಿಗಳು ಕೆಲವು ಸಂದರ್ಭಗಳಲ್ಲಿ ಮಾತ್ರ ಒಂದು ಕಣ್ಣು ತೆರೆದು ಮಲಗುತ್ತವೆ.
ಸರಳವಾಗಿ ಹೇಳುವುದಾದರೆ, ಪಕ್ಷಿಗಳು ತಮ್ಮ ಮೆದುಳಿನ ಅರ್ಧದಷ್ಟು ಭಾಗವನ್ನು ನಿದ್ರೆಯ ಸಮಯದಲ್ಲಿಯೂ ಸಹ ಜಾಗೃತ ಸ್ಥಿತಿಯಲ್ಲಿ ಸಕ್ರಿಯವಾಗಿರಿಸಿಕೊಳ್ಳುತ್ತವೆ.
ನಿದ್ರಿಸುವಾಗಲೂ ಜಾಗೃತ ಸ್ಥಿತಿಯಲ್ಲಿ ಇರುವುದರಿಂದ, ಪಕ್ಷಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇಷ್ಟೇ ಅಲ್ಲದೆ ಪಕ್ಷಿಗಳಿಗೆ ಮರಗಳ ರಚನೆಯ ಬಗ್ಗೆ ಉತ್ತಮ ಜ್ಞಾನವಿದೆ. ಪಕ್ಷಿಗಳು ಯಾವಾಗಲೂ ನಿದ್ರೆಗೆ ಸೂಕ್ತ ರೆಂಬೆಗಳಿರುವ ಮರವನ್ನು ಆಯ್ಕೆ ಮಾಡುತ್ತವೆ. ಎಲ್ಲಿ ತನ್ನ ದೇಹವನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬಹುದೋ, ಅಲ್ಲೇ ಮಲಗುತ್ತವೆ.
ಮತ್ತೊಂದು ಪ್ರಮುಖ ಅಂಶವೆಂದರೆ, ಪಕ್ಷಿಗಳು ಬಹಳ ಕಡಿಮೆ ಅವಧಿಯ ನಿದ್ದೆ ಮಾಡುತ್ತವೆ. ಮನುಷ್ಯರು ಒಂದೇ ಬಾರಿ ದೀರ್ಘಕಾಲ ನಿದ್ರಿಸುತ್ತಾನೆ.
ನಿದ್ದೆ ಮಾಡುವಾಗ ಜಾಗೃತ ಸ್ಥಿತಿಯಲ್ಲಿರುವುದು, ಸಣ್ಣ ಅವಧಿಯ ನಿದ್ದೆ ಮತ್ತು ಮರದ ಬಗ್ಗೆ ತಿಳುದುಕೊಂಡಿರುವುದರಿಂದ ಪಕ್ಷಿಗಳು ಮಲಗುವಾಗ ಕೊಂಬೆಗಳಿಂದ ಬೀಳುವುದಿಲ್ಲ.
All photos: Pexels
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!