ಡಾಕ್ಟರ್ ಕೈಬರಹ ಏಕೆ ಅಷ್ಟು ಕಳಪೆಯಾಗಿರುತ್ತೆ?
By Jayaraj
Sep 25, 2024
Hindustan Times
Kannada
ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತಿದೆ. ಡಾಕ್ಟರ್‌ಗಳು ಭೂಮಿ ಮೇಲಿನ ದೇವರ ರೂಪ. ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ಮನುಷ್ಯರು ದೇವರನ್ನು ನೋಡುತ್ತಾರೆ.
ಆದರೆ, ವೈದ್ಯರು ಕೊಡುವ ಔಷಧಿಯ ಪ್ರಸ್ಕ್ರಿಪ್ಷನ್ ಓದಲು ಹಲವರಿಂದ ಆಗಲ್ಲ. ಚೀಟಿ ಮೇಲೆ ಸುಮ್ಮನೆ ಏನೋ ಒಂದು ಗೀಚಿದಂತೆ ಕಾಣುತ್ತದೆ.
ಹೆಚ್ಚಿನ ವೈದ್ಯರು ಕೊಡುವ ಪ್ರಿಸಕ್ರಿಪ್ಷನ್‌ನಲ್ಲಿ ಕೈಬರಹ ಕಳಪೆಯಾಗಿರುತ್ತದೆ. ಅದನ್ನು ಮೆಡಿಕಲ್ ಸ್ಟೋರ್ ಸಿಬ್ಬಂದಿ ಅಥವಾ ಆಸ್ಪತ್ರೆಯವರು ಮಾತ್ರ ಅರ್ಥಮಾಡಿಕೊಳ್ಳಬಹುದು.
ವೈದ್ಯರ ಕಳಪೆ ಕೈಬರಹದಿಂದಾಗಿ ಆ ಚೀಟಿ ಓದಲು ಜನಸಾಮಾನ್ಯರು ಪರದಾಡುವಂತಾಗಿದೆ. ಅಷ್ಟಕ್ಕೂ ವೈದ್ಯರ ಕೈಬರಹ ಅಷ್ಟೇಕೆ ಕೆಟ್ಟದಾಗಿದೆ?
ವೈದ್ಯರು ನಿತ್ಯ ನೂರಾರು ರೋಗಿಗಳ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ. ಹೆಚ್ಚಿನ ಬರವಣಿಗೆಯಿಂದ ವೈದ್ಯರ ಕೈ ಬರಹ ಹೀಗಿದೆ.
ಅನೇಕ ಔಷಧಿಗಳಿಗೆ ಬಹಳ ಉದ್ದ ಹೆಸರುಗಳಿರುತ್ತವೆ. ಅದನ್ನು ಒಂದೇ ಉಸಿರಿನಲ್ಲಿ ಜಾಯಿಂಟ್ ಅಕ್ಷರಗಳಲ್ಲಿ ಬರೆಯುತ್ತಾರೆ. ಆ ಔಷಧಿಯ ಹೆಸರನ್ನು ವೈದ್ಯಕೀಯ ಪದದ ಪ್ರಕಾರ ಬರೆಯುತ್ತಾರೆ.
ರೋಗಿಗಳಿಗೆ ಔಷಧಿ ಸೂಚಿಸುವುದನ್ನು ಹೊರತುಪಡಿಸಿ ಡಾಕ್ಟರ್‌ಗಳಿಗೆ ಹಲವು ಕೆಲಸಗಳಿರುತ್ತವೆ. ಸಮಯದ ಅಭಾವದಿಂದ ವೇಗವಾಗಿ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ.
ವೈದ್ಯಕೀಯ ಶಿಕ್ಷಣ ಪಡೆಯುವಾಗಲೇ ಅವರಿಗೆ ಹೆಚ್ಚು ಅಸೈನ್‌ಮೆಂಟ್, ನೋಟ್ಸ್ ಬರೆಯಬೇಕಾಗಿರುತ್ತದೆ. ಹೀಗಾಗಿ ವೇಗದ ಬರವಣಿಗೆಯಿಂದ ಅಕ್ಷರದ ಗುಣಮಟ್ಟ ಹಾಳಾಗುತ್ತದೆ.
ಡಾಕ್ಟರ್‌ಗಳು ಆರಂಭದಿಂದಲೂ ಜಾಯಿಂಟ್ ಲೆಟರ್ ಬರವಣಿಗೆ ಅಭ್ಯಾಸ ಮಾಡಿರುತ್ತಾರೆ. ಅದು ಎಲ್ಲರಿಂದಲೂ ಓದಲು ಕಷ್ಟವಾಗುತ್ತದೆ.
All photos: Pixabay
ಈ 8 ಕಾರಣಕ್ಕಾಗಿ ಪ್ರತಿದಿನ ಸೂರ್ಯಕಾಂತಿ ಬೀಜ ಸೇವಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ