ನೆನಪಿನ ಶಕ್ತಿ ಕಡಿಮೆಯಾಗಲು ಈ 6 ಅಂಶಗಳೇ ಪ್ರಮುಖ ಕಾರಣ 

By Reshma
Sep 16, 2024

Hindustan Times
Kannada

ನಮ್ಮ ಮೆದುಳಿನ ಕಾರ್ಯ ನಿರ್ವಹಣೆಯು ನಾವು ಏನು ತಿನ್ನುತ್ತೇವೆ, ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡುತ್ತೇವೆ, ನಮಗೆ ಎಷ್ಟು ಒತ್ತಡವಿದೆ ಎಂಬುದರ ಮೇಲೆ ಅವಲಂಬಿತವಾಗಿದೆ 

ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ  ಜ್ಞಾಪಕ ಶಕ್ತಿಯೂ ಚೆನ್ನಾಗಿರುತ್ತದೆ. ನಮ್ಮ ದಿನನಿತ್ಯದ ಹಲವು ಅಭ್ಯಾಸಗಳು ಸ್ಮರಣಶಕ್ತಿಯನ್ನು ದುರ್ಬಲಗೊಳಿಸಲು ಮತ್ತು ವಿಷಯಗಳನ್ನು ಮರೆತು ಬಿಡಲು ಕಾರಣವಾಗುತ್ತವೆ 

ದಿನಚರಿಯಲ್ಲಿನ ಅಂಶಗಳು ತಿಳಿದೋ ತಿಳಿಯದೆಯೋ ನಮ್ಮ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಅಭ್ಯಾಸಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಈ ಅಭ್ಯಾಸಗಳನ್ನು ಸುಧಾರಿಸುವ ಮೂಲಕ ಸ್ಮರಣಶಕ್ತಿಯನ್ನು ಬಲಪಡಿಸಿಕೊಳ್ಳಬಹುದು 

ತಜ್ಞರ ಪ್ರಕಾರ ಪ್ರತಿದಿನ ಅನಾರೋಗ್ಯಕರ ಆಹಾರವನ್ನು ಹೆಚ್ಚು ಸೇವಿಸಿದರೆ ಇದು ನಿಮ್ಮ ನೆನಪಿನ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ದೀರ್ಘಕಾಲದ ಮದ್ಯಪಾನ, ಧೂಮಪಾನ ಹಾಗೂ ಮಾದಕವಸ್ತುಗಳ ಸೇವನೆಯು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಕೂಡ ನೆನಪಿನ ಶಕ್ತಿ ಕುಂಠಿತವಾಗಬಹುದು 

ನಿದ್ದಯೆ ಕೊರತೆಯು ಸ್ಮರಣಶಕ್ತಿ ದುರ್ಬಲವಾಗಲು ಕಾರಣವಾಗಬಹುದು. ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಗುಣಮಟ್ಟದ ನಿದ್ದೆ ಮಾಡುವುದು ಅತಿ ಅವಶ್ಯ 

ದೇಹದಲ್ಲಿ ಪೋಷಕಾಂಶಗಳ ಕೊರತೆಯು ಜ್ಞಾಪಕ ಶಕ್ತಿ ದುರ್ಬಲವಾಗಲು ಕಾರಣವಾಗುತ್ತದೆ. ಮೆದುಳಿನ ಆರೋಗ್ಯ ಸುಧಾರಿಸುವ ಆಹಾರಗಳ ಸೇವನೆಗೆ ಹೆಚ್ಚು ಗಮನ ನೀಡಿ

ನೀವು ಹೆಚ್ಚು ಒತ್ತಡದಿಂದ ಕೂಡಿದ್ದರೆ, ಖಿನ್ನತೆ, ಆತಂಕ ನಿಮ್ಮನ್ನು ಬಾಧಿಸುತ್ತಿದ್ದರೆ ಇದು ಕೂಡ ನಿಮ್ಮ ನೆನಪಿನ ಶಕ್ತಿ ದುರ್ಬಲವಾಗಲು ಕಾರಣವಾಗುತ್ತದೆ

ನಮ್ಮ ಜೀವನಶೈಲಿಯು ಮೆದುಳಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಷ್ಕ್ರೀಯರಾಗಿದ್ದರೆ ಕ್ರಮೇಣ ಸ್ಮರಣಶಕ್ತಿ ಕುಂಠಿತವಾಗುತ್ತದೆ 

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂರ್ಪಕಿಸಿ 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?