ವಯಸ್ಸಾಗುತ್ತಾ ಹೋದಂತೆ ಜ್ಞಾಪಕ ಶಕ್ತಿ ದುರ್ಬಲವಾಗುತ್ತದೆ. ನೆನಪಿನ ಶಕ್ತಿ ಕುಂದಲು ಹಲವು ಕಾರಣಗಳಿರಬಹುದು. ಮುಖ್ಯವಾಗಿ ನಮ್ಮ ಆಹಾರ ಪದ್ಧತಿ, ಅಜಾಗರೂಕತೆ, ಜೀವನಶೈಲಿಯೂ ಕಾರಣವಾಗಿರಬಹುದು.
ನಿಮ್ಮ ಸ್ಮರಣಶಕ್ತಿಯನ್ನು ಬಲಪಡಿಸಲು ಕೆಲವೊಂದು ಮಾರ್ಗಗಳಿವೆ. ಅದನ್ನು ಅನುಸರಿಸುವ ಮೂಲಕ ನಿಮ್ಮ ಮೆದುಳಿನ ಕಾರ್ಯವನ್ನು ಸುಧಾರಿಸಬಹುದು. ಜೊತೆಗೆ ನೆನಪಿನ ಶಕ್ತಿಯನ್ನು ಹೆಚ್ಚಿಸಬಹುದು.
ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ದೇಹಕ್ಕೆ ಸಂಪೂರ್ಣ ನಿದ್ರೆ ಅಗತ್ಯ. ಆರೋಗ್ಯವಂತ ವಯಸ್ಕ ವ್ಯಕ್ತಿಯು ದಿನಕ್ಕೆ ಕನಿಷ್ಠ 7ರಿಂದ 8 ಗಂಟೆಗಳ ನಿದ್ದೆ ಮಾಡಬೇಕು.
ಮನಸ್ಸು ಹಾಗೂ ದೇಹವನ್ನು ಸದೃಢಗೊಳಿಸಲು ಆರೋಗ್ಯಕರ ಆಹಾರ ಸೇವಿಸಬೇಕು.
ಮೆದುಳನ್ನು ಚುರುಕುಗೊಳಿಸಿ ನೆನಪಿನ ಶಕ್ತಿ ಬಲಪಡಿಸಲು, ನಿಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ-3 ಸಮೃದ್ಧವಾಗಿರುವ ಹಣ್ಣು-ತರಕಾರಿಗಳನ್ನು ಸೇವಿಸಿ.
ನಿತ್ಯ ಯೋಗ ಮತ್ತು ಧ್ಯಾನ ಮಾಡುವುದರಿಂದ ಮನಸ್ಸು ಶಾಂತ ಮತ್ತು ಸ್ಥಿರವಾಗಿರುತ್ತದೆ. ಅದು ನಿಮ್ಮ ಸ್ಮರಣಶಕ್ತಿನ್ನು ಬಲಪಡಿಸುತ್ತದೆ.
ಪ್ರತಿದಿನ ಬೆಳಿಗ್ಗೆ ಎದ್ದು ನಡಿಗೆಗೆ ಹೋಗುವುದು ಹಾಗೂ ವ್ಯಾಯಾಮ ಮಾಡುವುದರಿಂದ ಜ್ಞಾಪಕಶಕ್ತಿ ಬಲವಾಗುತ್ತದೆ.
ಮಾದಕ ವ್ಯಸನ ಹೊಂದಿದ್ದರೆ, ಧೂಮಪಾನ ಮಾಡುತ್ತಿದ್ದರೆ ಮತ್ತು ಆಲ್ಕೋಹಾಲ್ ಸೇವಿಸುವ ಅಭ್ಯಾಸವಿದ್ದರೆ, ಅಂಥಾ ಅಭ್ಯಾಸಗಳನ್ನು ಬಿಟ್ಟುಬಿಡಿ. ಅವು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಕೂಡಾದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಹಾನಿಕಾರಕ. ಅದರ ಬದಲಿಗೆ ಆರೋಗ್ಯಕರ ಆಹಾರ ಸೇವಿಸಿ.