ಶಾಪಿಂಗ್ ವೇಳೆ ಹಣ ಬೇಕಾಬಿಟ್ಟಿ ಖರ್ಚಾಗುವುದನ್ನು ತಪ್ಪಿಸುವುದು ಹೇಗೆ?
By Jayaraj
May 03, 2024
Hindustan Times
Kannada
ಆಸೆಯೇ ಬೇರೆ, ಅಗತ್ಯವೇ ಬೇರೆ. ಹೀಗಾಗಿ ಆಸೆಗಿಂತ ಅಗತ್ಯದ ವಸ್ತುಗಳಿಗೆ ಹಣ ವ್ಯಯಿಸಿ.
ಇದ್ದ ವಸ್ತುಗಳನ್ನೇ ಮತ್ತೆ ಮತ್ತೆ ಖರೀದಿಸಿ ರಾಶಿ ಹಾಕಬೇಡಿ. ಇರುವುದರಲ್ಲೇ ಬದುಕಲು ಕಲಿತರೆ ಅನಗತ್ಯ ಖರ್ಚು ಕಡಿಮೆಯಾಗುತ್ತದೆ.
ಆಕರ್ಷಕ ಜಾಹೀರಾತು ನೋಡಿ ಮಾರು ಹೋಗಬೇಡಿ. ನಿಮ್ಮ ಬಜೆಟ್ ನೋಡಿಕೊಂಡು ಖರ್ಚು ಮಾಡಿ. ಅದಕ್ಕೂ ಮುನ್ನ ಒಮ್ಮೆ ಯೋಚಿಸಿ.
ಹಬ್ಬಗಳ ಸಮಯದಲ್ಲಿ ಕೊನೆ ಕ್ಷಣದಲ್ಲಿ ಖರೀದಿಸುವ ಯೋಚನೆ ಬೇಡ. ಮೊದಲೇ ಪ್ಲಾನ್ ಮಾಡಿಕೊಳ್ಳಿ.
ಶಾಪಿಂಗ್ ಮಾಲ್‌ಗೆ ಹೋಗುವಾಗ ಆನ್‌ಲೈನ್ ಪೇಮೆಂಟ್ ಬದಲಿಗೆ ನಗದು ವ್ಯವಹಾರಕ್ಕೆ ನೆಚ್ಚಿಕೊಳ್ಳಿ. ಆಗ ಖರ್ಚಿನ ಮೇಲೆ ಸ್ವಲ್ಪ ಮಿತಿ ಹೇರಬಹುದು.
ಅನ್ಯರನ್ನು ಮೆಚ್ಚಿಸುವ ಸಲುವಾಗಿ ಶಾಪಿಂಗ್ ಮಾಡಬೇಡಿ. ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳಿ.
ಶಾಪಿಂಗ್‌ಗೆ ಮನೆಯಿಂದ ಹೊರಡುವಾಗ ಬೇಕಾದ ವಸ್ತುಗಳ ಪಟ್ಟಿ ಮಾಡಿ. ಆಫರ್‌ಗಳು ಇವೆ ಎಂದು ಮರುಳಾಗಿ ಹೆಚ್ಚು ಖರೀದಿಸಬೇಡಿ.
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ