1. ಬೇಗ ಹೂಡಿಕೆ ಆರಂಭಿಸಿ: ನೀವು ತಡವಾಗಿ ಹೂಡಿಕೆ ಆರಂಭಿಸಿದರೆ ತಪ್ಪುಗಳಾಗುವ ಸಾಧ್ಯತೆಯಿದೆ. ಅವಸರದ ಹೂಡಿಕೆ ಒಳ್ಳೆಯದಲ್ಲ. ಸಣ್ಣ ವಯಸ್ಸಿನಲ್ಲಿ ಚಿಕ್ಕದಾಗಿ ಉಳಿತಾಯ ಮಾಡುತ್ತ ಆರಂಭಿಸುವುದು ಒಳ್ಳೆಯದು.
pixa bay
2. ಸರಿಯಾದ ರೀತಿ ಸ್ವತ್ತುಗಳ ಹಂಚಿಕೆ: 20 ವರ್ಷ ವಯಸ್ಸಿನ ಆಸುಪಾಸಿನಲ್ಲಿರುವವರು ತಮ್ಮ ಆದಾಯವನ್ನು ಪೂರ್ತಿ ಈಕ್ವಿಟಿ ಷೇರಿಗೆ ಹಾಕಬೇಕು ಎಂದಿಲ್ಲ. ಸ್ವತ್ತುಗಳ ಹಂಚಿಕೆ ಸರಿಯಾಗಿರಲಿ.
pixa bay
3. ಸರಳ ಹೂಡಿಕೆ: ಸರಳ ಉತ್ಪನ್ನಗಳ ಹೂಡಿಕೆ ಮಾಡುವ ಮೂಲಕ ಹೂಡಿಕೆ ಆರಂಭಿಸಿ. ಸಿಪ್ ಹೂಡಿಕೆ ಬೆಸ್ಟ್ . ಬ್ಯಾಲೆನ್ಸೆಡ್ ಅಡ್ವಂಟೇಜ್ ಫಂಡ್ ಮತ್ತು ಮಿಡ್ ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲಿ ಸಿಪ್ ಹೂಡಿಕೆ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.
pixa bay
4. ಸರಿಯಾದ ಗುರಿ ಹೊಂದಿ: ಮೊದಲಿಗೆ ನಿಮ್ಮ ಗುರಿಯನ್ನು ಬರೆಯಿರಿ. ಯಾವ ರೀತಿ ಹೂಡಿಕೆ ಮಾಡಿ ಎಷ್ಟು ಆದಾಯ ಗಳಿಸಬಹುದು ಎಂದು ತಿಳಿಯಿರಿ. ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ, ಎಲ್ಲಿ ಹೆಚ್ಚು ಲಾಭ ಬರಬಹುದು ಎಮದು ವಿಶ್ಲೇಷಣೆ ಮಾಡಿ.
Enter text Here
5. ನಿಮ್ಮ ಹಣವನ್ನು ಎಂಜಾಯ್ ಮಾಡಿ: ಉಳಿತಾಯ ಮತ್ತು ಹೂಡಿಕೆ ಅತ್ಯಂತ ಅಗತ್ಯ. ಇದೇ ಸಮಯದಲ್ಲಿ ಹಣವನ್ನು ಎಂಜಾಯ್ ಮಾಡುವುದು ಅಗತ್ಯ. "ನೀವು ಬಯಸುವ ವಸ್ತುಗಳಿಗೆ ಹಣ ಖರ್ಚು ಮಾಡಿ. ಶಾಪಿಂಗ್ ಇತ್ಯಾದಿ ಸಣ್ಣ ಖುಷಿಗಳಿಗೆ, ಮನೆ ಖರೀದಿ ಇತ್ಯಾದಿ ದೊಡ್ಡ ಖುಷಿಗೆ ಖರ್ಚು ಮಾಡಿ ಎಂದು ಹಣಕಾಸು ತಜ್ಞರು ಸಲಹೆ ನೀಡಿದ್ದಾರೆ.
ಡಿಸ್‌ಕ್ಲೈಮರ್: ಇದು ಮಾಹಿತಿಗಾಗಿ ನೀಡಿದ ಬರಹ. ಸ್ವಯಂ ವಿವೇಚನೆಯಿಂದ ಹೂಡಿಕೆ ನಿರ್ಧಾರ ತೆಗೆದುಕೊಳ್ಳಿ.