1. ಎಂಎಸ್ ಧೋನಿ: 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು 133 ಗೆಲುವು, 91 ಸೋಲು ಕಂಡಿದ್ದಾರೆ. 2 ಪಂದ್ಯಗಳು ಫಲಿತಾಂಶ ಇಲ್ಲದೆ ಅಂತ್ಯ ಕಂಡಿವೆ. ಗೆಲುವಿನ ಶೇಕಡವಾರು 58.84.
2. ರೋಹಿತ್ ಶರ್ಮಾ: 158 ಪಂದ್ಯಗಳಿಗೆ ನಾಯಕನಾಗಿದ್ದ ರೋಹಿತ್ 87ರಲ್ಲಿ ಜಯ 67ರಲ್ಲಿ ಸೋಲನುಭವಿಸಿದ್ದಾರೆ. 4 ಪಂದ್ಯಗಳು ಟೈ ಆಗಿವೆ. ಗೆಲುವಿನ ಶೇಕಡವಾರು 55.06.
3. ವಿರಾಟ್ ಕೊಹ್ಲಿ: 143 ಪಂದ್ಯಗಳಿಗೆ ಕ್ಯಾಪ್ಟನ್ ಆಗಿದ್ದ ಕೊಹ್ಲಿ 66 ಗೆಲುವು, 70 ಸೋಲು ಕಂಡಿದ್ದಾರೆ. 3 ಪಂದ್ಯಗಳು ಟೈ, 4 ಪಂದ್ಯಗಳು ಫಲಿತಾಶ ಕಾಣದೆ ಅಂತ್ಯಗೊಂಡಿವೆ. ಗೆಲುವಿನ ಶೇಕಡವಾರು 46.15.
4. ಗೌತಮ್ ಗಂಭೀರ್: 129 ಪಂದ್ಯಗಳಿಗೆ ನಾಯಕನಾಗಿದ್ದ ಗೌತಿ, 71 ಗೆಲುವು, 57ರಲ್ಲಿ ಸೋತಿದ್ದಾರೆ. 1 ಪಂದ್ಯ ಟೈ ಆಗಿತ್ತು. ಗೆಲುವಿನ ಶೇಕಡವಾರು 55.03.
5. ಡೇವಿಡ್ ವಾರ್ನರ್: 83 ಪಂದ್ಯಗಳಲ್ಲಿ ನಾಯಕನಾಗಿದ್ದ ವಾರ್ನರ್, 40ರಲ್ಲಿ ಗೆಲುವು, 41ರಲ್ಲಿ ಸೋಲು ಅನುಭವಿಸಿದ್ದಾರೆ. 2 ಪಂದ್ಯಗಳು ಟೈ ಆಗಿವೆ. ಗೆಲುವಿನ ಶೇಕಡವಾರು 48.19.