ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶ ಯಾವುದು?

By Jayaraj
Nov 13, 2024

Hindustan Times
Kannada

ಪ್ರಪಂಚದಾದ್ಯಂತ ವಿವಿಧ ಧರ್ಮಗಳ ಜನರು ವಾಸಿಸುತ್ತಿದ್ದಾರೆ.

ಅದರಲ್ಲೂ ಮುಖ್ಯವಾಗಿ ಕೆಲವು ಧರ್ಮಗಳನ್ನು ಅನುಸರಿಸುವ ದೊಡ್ಡ ಸಂಖ್ಯೆಯ ಜನರಿದ್ದಾರೆ.

ಜಗತ್ತಿನಲ್ಲಿ ವಾಸಿಸುವ ಹೆಚ್ಚಿನ ಜನರು ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಾರೆ. 

ಇದೇ ವೇಳೆ ಇಸ್ಲಾಂ ಧರ್ಮ ಅನುಸರಿಸುವವರ ಸಂಖ್ಯೆಯೂ ಕೋಟಿಯಲ್ಲಿದೆ.

ಮುಸ್ಲಿಂ ಜನಸಂಖ್ಯೆಯು ಹೆಚ್ಚು ಇರುವ ವಿಶ್ವದ ಅನೇಕ ದೇಶಗಳಿವೆ.

ಯಾವ ದೇಶದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದೆ ಎಂಬುದನ್ನು ತಿಳಿಯೋಣ.

ವಿಶ್ವ ಜನಸಂಖ್ಯಾ ವಿಮರ್ಶೆಯ ಇತ್ತೀಚಿನ ಮಾಹಿತಿ ಪ್ರಕಾರ, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ದೇಶ ಇಂಡೋನೇಷ್ಯಾ.

ಇಂಡೋನೇಷ್ಯಾದಲ್ಲಿ ಮುಸ್ಲಿಮರ ಜನಸಂಖ್ಯೆ 24 ಕೋಟಿ 27 ಲಕ್ಷ. ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ಇಲ್ಲಿ 24 ಕೋಟಿ 7 ಲಕ್ಷ ಮುಸ್ಲಿಮರು ವಾಸಿಸುತ್ತಿದ್ದಾರೆ. 

20 ಕೋಟಿಗೂ ಹೆಚ್ಚು ಮುಸ್ಲಿಮರು ವಾಸಿಸುವ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ