New Year: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಹೆಲ್ಪ್ ಮಾಡುತ್ತೆ ಈ ಸಿಂಪಲ್ ಟಿಪ್ಸ್
By Reshma
Dec 26, 2023
Hindustan Times
Kannada
ಇನ್ನೇನು ಹೊಸ ವರ್ಷ ಬಂದೇ ಬಿಟ್ಟಿತು. ನ್ಯೂ ಇಯರ್ ಪಾರ್ಟಿ ಮಾಡೋದು ಸದ್ಯ ಕಾಮನ್ ಟ್ರೆಂಡ್. ಆದ್ರೆ ಪಾರ್ಟಿ ಮಾಡಿದ ಮೇಲೆ ಹ್ಯಾಂಗೋವರ್ ಕಾಡೋದು ಅಷ್ಟೇ ಸಹಜ.
ಹ್ಯಾಂಗೋವರ್‌ಗೆ ಪ್ರಮುಖ ಕಾರಣ ಡಿಹೈಡ್ರೇಷನ್, ಹಾರ್ಮೋನುಗಳ ಅಸಮತೋಲನ ಹಾಗೂ ಮದ್ಯಪಾನದ ಹಾನಿಕಾರ ಅಂಶಗಳು. ಹಾಗಾದ್ರೆ ಹ್ಯಾಂಗೋವರ್ ನಿಯಂತ್ರಿಸುವುದು ಹೇಗೆ?
ಸಾಕಷ್ಟು ದ್ರವಾಹಾರ ಸೇವನೆ: ಎಳನೀರು, ಓಆರ್‌ಎಸ್‌ನಂತಹ ಎಲೆಕ್ಟ್ರೋಲೈಟ್ ಅಂಶ ಅಧಿಕ ಇರುವ ಪಾನೀಯ ಸೇವಿಸಿ. ಇದು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ನೆರವಾಗುತ್ತದೆ.
ಸಮತೋಲಿತ ಆಹಾರ ಸೇವನೆ: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರಬೇಕು ಅಂದ್ರೆ ಮರುದಿನ ಬೆಳಿಗ್ಗೆ ಪೌಷ್ಟಿಕಾಂಶಯುಕ್ತ ಉಪಾಹಾರ ಸೇವಿಸಬೇಕು.
ನೋವು ನಿವಾಕರಗಳ ಸೇವನೆ: ಹ್ಯಾಂಗೋವರ್ ಆದಾಗ ತಲೆನೋವು, ಸ್ನಾಯುಗಳ ಸೆಳೆತ ಉಂಟಾಗುವುದು ಸಹಜ. ಅದಕ್ಕಾಗಿ ನೋವು ನಿವಾರಕಗಳನ್ನು ಸೇವಿಸಬಹುದು.
ವಿಶ್ರಾಂತಿ: ಸಾಕಷ್ಟು ನಿದ್ದೆ ಮಾಡುವುದು ಕೂಡ ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರಲು ಇರುವ ಉತ್ತಮ ದಾರಿ. ಇದು ಸಂಪೂರ್ಣ ದೇಹಕ್ಕೆ ವಿಶ್ರಾಂತಿ ಒದಗಿಸುತ್ತದೆ.
ವಿಟಮಿನ್ ಬಿ ಅಂಶ: ವಿಟಮಿನ್ ಬಿ ಅಂಶ ಸಮೃದ್ಧವಾಗಿರುವ ಆಹಾರಗಳ ಸೇವನೆಯಿಂದಲೂ ಆಲ್ಕೋಹಾಲ್ ಹ್ಯಾಂಗೋವರ್‌ನಿಂದ ಹೊರ ಬರಲು ಸಾಧ್ಯವಾಗುತ್ತದೆ.
ಸಿಹಿ ಸೇವನೆ ಸಲ್ಲ: ಹ್ಯಾಂಗೋವರ್ ಉಂಟಾದಾಗ ಸಿಹಿಯಾದ ವಸ್ತುಗಳನ್ನು ತಿನ್ನಬೇಕು ಎನ್ನಿಸಬಹುದು. ಆದರೆ ಇದು ಹ್ಯಾಂಗೋವರ್ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸಬಹುದು.
ಕೆಫೀನ್ ಅಂಶಕ್ಕೆ ಕಡಿವಾಣ ಹಾಕಿ: ಕೆಫೀನ್ ಅಂಶ ಇರುವ ಆಹಾರ ಹಾಗೂ ಪಾನೀಯಗಳ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಕಾಫಿ, ಟೀ ಸೇವಿಸದೇ ಇರುವುದು ಉತ್ತಮ.
ಹ್ಯಾಂಗೋವರ್ ಇದ್ದಾಗ ಇನ್ನಷ್ಟು ಕುಡಿಯುವುದು ಪರಿಸ್ಥಿತಿಯನ್ನು ಹದಗೆಡಿಸಬಹುದು.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ