ಸಿಕಂದರ್ ಕಾ ಮುಕದ್ದಾರ್ ಬಿಡುಗಡೆಗೆ ಮುನ್ನ ಈ 8 ದರೋಡೆ ಸಿನಿಮಾ ನೋಡಿ

By Praveen Chandra B
Nov 22, 2024

Hindustan Times
Kannada

ಸಿಕಂದರ್ ಕಾ ಮುಕದ್ದಾರ್: ಜಿಮ್ಮಿ ಶೆರ್ಗಿಲ್, ಅವಿನಾಶ್ ತಿವಾರಿ ಮತ್ತು ತಮನ್ನಾ ಭಾಟಿಯಾ ನಟನೆಯ ಈ ಸಿನಿಮಾ ನವೆಂಬರ್‌ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದು ದರೋಡೆ ಹಿನ್ನೆಲೆಯ ಕಥೆಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇದೇ ರೀತಿಯ ಸಿನಿಮಾಗಳನ್ನು ನೋಡಲು ಬಯಸಿದರೆ ಇಲ್ಲೊಂದಿಷ್ಟು ಚಂದದ ಸಿನಿಮಾಗಳ ಮಾಹಿತಿಯಿದೆ.

ಲಿಫ್ಟ್‌: ಕೆವಿನ್ ಹಾರ್ಟ್‌ನ  ಈ ದರೋಡೆ ಕಥೆಯ ಸಿನಿಮಾವು ಆಸಕ್ತಿದಾಯಕವಾಗಿದೆ. ಈತ ಪ್ರಯಾಣಿಕರ ವಿಮಾನದಲ್ಲಿ ಚಿನ್ನ ಕದಿಯಲು ಇಂಟರ್‌ಪೋಲ್‌ ಅಧಿಕಾರಿ ಜತೆ ಸೇರಿಕೊಳ್ಳುತ್ತಾನೆ.

ಆರ್ಮಿ ಆಫ್‌ ದಿ ಡೆಡ್‌: ಅಪೋಕ್ಯಾಲಿಪ್ಸ್ ನಂತರದ ಜಗತ್ತಿನಲ್ಲಿ ಡೆಡ್‌ಸೆಟ್‌ನ ಸೈನ್ಯ ಮತ್ತು ಜೊಂಬಿಯ ಯೋಜನೆ. ಇದು ಭಯಾನಕ ಥ್ರಿಲ್ಲರ್‌ ಸಿನಿಮಾವಾಗಿದೆ.

ರೆಡ್‌ ನೋಟಿಸ್‌: ಇಂಟರ್‌ಪೋಲ್‌ ಏಜೆಂಟ್‌ವೊಬ್ಬನ ಸಾಹಸ ಸಿನಿಮಾ.

ಆರ್ಮಿ ಆಫ್‌ ಥೀವ್ಸ್‌: ಅತ್ಯಧಿಕ ಭದ್ರತೆಯುಳ್ಳ ಬ್ಯಾಂಕ್‌ನಲ್ಲಿ ಕಳ್ಳತನ ಮಾಡಲು ನಿಗೂಢ ಮಹಿಳೆಯೊಬ್ಬಳು ಬ್ಯಾಂಕ್‌ ಟೆಲ್ಲರ್‌ನ ನೇಮಕ ಮಾಡಿಕೊಳ್ಳುತ್ತಾಳೆ. 

ಬೇಬಿ ಡ್ರೈವರ್‌: ಬಾಲಕನೊಬ್ಬ ದರೋಡೆಕೋರರಿಗೆ ಡ್ರೈವಿಂಗ್‌ನಲ್ಲಿ ನೆರವಾಗುವ ಸಾಹಸಮಯ ಚಿತ್ರ ಇದಾಗಿದೆ.

ಟ್ರಿಪಲ್‌ ಫ್ರಂಟಿಯರ್‌: ಬೆನ್ ಅಫ್ಲೆಕ್, ಆಸ್ಕರ್ ಐಸಾಕ್ ಮತ್ತು ಚಾರ್ಲಿ ಹುನ್ನಾಮ್  ನಟಿಸಿರುವ  ಅಪರಾಧ, ದರೋಡೆ ಕಥಾನಕದ ಥ್ರಿಲ್ಲರ್‌ ಸಿನಿಮಾ. 

ಹ್ಯಾಪಿ ನ್ಯೂ ಇಯರ್‌: ಫರಾಹ ಖಾನ್‌ ಹಾಸ್ಯ ದರೋಡೆ ಥ್ರಿಲ್ಲರ್‌ ಸಿನಿಮಾ. ಇದರಲ್ಲಿ ಶಾರೂಖ್‌ ಖಾನ್‌, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದಾರೆ.

ಅನ್‌ಕಟ್‌ ಜೆಮ್ಸ್‌:  ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ಆಡಮ್ ಸ್ಯಾಂಡ್ಲರ್  ನಟಿಸಿದ್ದಾರೆ.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna