ಪೋಷಕರು ಮಕ್ಕಳ ಎದುರು ಎಂದಿಗೂ ಈ 6 ತಪ್ಪುಗಳನ್ನು ಮಾಡಬಾರದು

By Reshma
Oct 18, 2024

Hindustan Times
Kannada

ಮಕ್ಕಳನ್ನ ಬೆಳೆಸುವುದು ಖಂಡಿತ ಸುಲಭದ ಮಾತಲ್ಲ. ಇದಕ್ಕಾಗಿ ಪೋಷಕರು ಸಾಕಷ್ಟು ಶ್ರಮಿಸಬೇಕು

ಮಕ್ಕಳ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ತಪ್ಪುಗಳಿಗೆ ಪೋಷಕರೇ ಜವಾಬ್ದಾರರು. ಮಕ್ಕಳು ತಾವು ನೋಡುವುದನ್ನೇ ಕಲಿಯುತ್ತಾರೆ ಎಂಬುದನ್ನು ಮರೆಯುವಂತಿಲ್ಲ

ಇತ್ತೀಚಿನ ದಿನಗಳಲ್ಲಿ ಮಕ್ಕಳು 10 ವರ್ಷ ದಾಟುವ ಹಂತದಲ್ಲೇ ಪೋಷಕರೊಂದಿಗೆ ಜಗಳವಾಡಲು ಶುರು ಮಾಡುತ್ತಾರೆ 

ಮಕ್ಕಳ ವರ್ತನೆ ಸರಿಯಲ್ಲಿದೇ ಇರುವುದಕ್ಕೆ ಪೋಷಕರು ಕಾರಣವಾಗುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪೋಷಕರು ಮಾಡುವ ಈ ತಪ್ಪುಗಳು ಮಕ್ಕಳನ್ನು ಕೆರಳಿಸುತ್ತದೆ 

ಯಾವಾಗಲೂ ಮಕ್ಕಳಿಗೆ ಗದರುವುದು, ಬಯ್ಯುವುದು ಮಾಡುತ್ತಿದ್ದರೆ ನಿಮ್ಮ ಮೇಲೆ ಮಗುವಿಗೆ ಕಿರಿಕಿರಿ ಆರಂಭವಾಗುತ್ತದೆ 

ಮಗು ಏನನ್ನಾದರೂ ಕಲಿಯುವಾಗ ಪದೇ ಪದೇ ಆ ಕೆಲಸದಲ್ಲಿ ತಪ್ಪು ಹುಡುಕುವುದು ಕೂಡ ಮಕ್ಕಳಿಗೆ ಇಷ್ಟವಾಗುವುದಿಲ್ಲ, ಇದು ಅವರ ಬೆಳವಣಿಗೆಯನ್ನೂ ಕುಂಠಿತಗೊಳಿಸಬಹುದು 

ಮಗುವಿನ ಮುಂದೆ ಗಂಡ–ಹೆಂಡತಿ ಜೋರಾಗಿ ಜಗಳ ಮಾಡುವುದು ಮಗುವಿನಲ್ಲಿ ಅಭದ್ರತೆ ಭಾವನೆ, ಭಯ ಮೂಡಿಸುತ್ತದೆ

ನಿಮ್ಮ ಮಗುವನ್ನು ಇತರ ಮಕ್ಕಳೊಂದಿಗೆ ಹೋಲಿಸಿದರೆ ಅಥವಾ ಮಗುವಿನ ಅಭ್ಯಾಸಗಳನ್ನು ಟೀಕಿಸಿದರೆ ಮಗು ಕೋಪ ಹಾಗೂ ಹತಾಶೆಯ ಭಾವ ಹೊಂದಬಹುದು 

ಮಗುವಿನ ಮುಂದೆ ಗಂಡ ಹೆಂಡತಿಯನ್ನು ಹೊಡೆಯುವುದು, ಬಯ್ಯುವುದು ಮಾಡಿದರೆ ಮಗು ಅಪ್ಪನನ್ನು ದ್ವೇಷಿಸಲು ಆರಂಭಿಸುತ್ತದೆ 

ಮಗುವಿನ ತಪ್ಪುಗಳನ್ನು ತಿದ್ದುವಾಗ ಪ್ರೀತಿಯಿಂದ ತಿಳಿ ಹೇಳಬೇಕು, ಮಗುವಿನ ಮೇಲೆ ಕೈ ಮಾಡಬಾರದು

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ