ಈ 6 ರೀತಿಯ ಆರೋಗ್ಯ ಸಮಸ್ಯೆ ಇರುವವರು ಪಾನ್ ಮಸಾಲಾ ತಿನ್ನಬಾರದು

By Raghavendra M Y
Apr 25, 2024

Hindustan Times
Kannada

ಪ್ರತಿದಿನ ಎಲೆ ಅಡಿಕೆ ಜಗಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಇದನ್ನು ತಿನ್ನಬಾರದು

ವೀಳ್ಯದೆಲೆಯಲ್ಲಿ ಕೆಲವು ರಾಸಾಯನಿಕಗಳಿವೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಹಾನಿಕಾರಕವಾಗಿದೆ

ಯಾರೆಲ್ಲಾ ಪಾನ್ ಮಸಾಲಾ ಅಥವಾ ಎಲೆ ಅಡಿಕೆ ತಿನ್ನಬಾರದು ಎಂಬುದನ್ನು ತಿಳಿಯೋಣ

ಅತಿಯಾಗಿ ಬೆವರುವವರು ಎಲೆ ಅಡಿಕೆ ಜಗಿಯುವುದನ್ನು ತಪ್ಪಿಸಬೇಕು

ಶುಗರ್ ಇರುವವರು ವೈದ್ಯರ ಸಲಹೆಯನ್ನು ಪಡೆದೇ ಪಾನ್ ಮಸಾಲಾ ಸೇವಿಸಬೇಕು

ರಕ್ತದೊಡ್ಡ ಕಡಿಮೆ ಇಲ್ಲವೇ ಜಾಸ್ತಿ ಇರುವವರು ಪ್ರತಿದಿನ ಎಲೆ ಅಡಿಕೆ ಜಗಿಯುವುದನ್ನು ತಪ್ಪಿಸಬೇಕು

ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಂತಹ ಜನರು ಪಾನ್ ಮಸಾಲಾ ತಿನ್ನಬಾರದು

ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ಎಲೆ ಅಡಿಕೆ ಜಗಿಯಬಾರದು. ವೀಳ್ಯದೆಲೆಯಲ್ಲಿನ ರಾಸಾಯನಿಕ ಔಷಧಿಯೊಂದಿಗೆ ಸೇರಿದಾಗ ದೇಹಕ್ಕೆ ಹಾನಿ ಮಾಡುತ್ತೆ

ಹಾರ್ಮೋನ್‌ಗಳ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಎಲೆ ಅಡಿಕೆಯಿಂದ ದೂರ ಇರಬೇಕು

ಆರೋಗ್ಯವಂತ ಜನ ಸೀಮಿತ ಪ್ರಮಾಣದಲ್ಲಿ ವೀಳ್ಯದೆಲೆ ತಿನ್ನಬಹುದು. ತಂಬಾಕು ಉತ್ಪನ್ನಗಳನ್ನ ಬೆರೆಸಿ ತಿನ್ನಬಾರದು. ಅತಿಯಾದ ವೀಳ್ಯದೆಲೆ ಸೇವನೆ ಆರೋಗ್ಯ ಹಾನಿಕಾರಕ

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ರೀತಿಯ ವಿಶೇಷ ಮಾಹಿತಿಗಾಗಿ ತಜ್ಞರಿಂದ ಸಲಹೆಗಳನ್ನು ಪಡೆಯಿರಿ

ಆರ್‌ಆರ್‌ vs ಆರ್‌ಸಿಬಿ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?