ಶ್ವಾನಗಳು ಇಷ್ಟಪಟ್ಟು ತಿನ್ನುವ ಹಣ್ಣುಗಳಿವು
By Rakshitha Sowmya
Nov 24, 2024
Hindustan Times
Kannada
ಶ್ವಾನಗಳು ಹಣ್ಣು ತಿನ್ನುತ್ತವೆ ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ, ಈ ಹಣ್ಣುಗಳನ್ನು ನೀವು ನಿಮ್ಮ ಪ್ರೀತಿಯ ಶ್ವಾನಕ್ಕೆ ತಿನ್ನಿಸಬಹುದು
ಸೇಬುಗಳಲ್ಲಿ ವಿಟಮಿನ್, ಫೈಬರ್ ಅಂಶವಿದೆ ಇದನ್ನು ನಿಮ್ಮ ನಾಯಿಗೆ ತಿನ್ನಿಸಬಹುದು, ತಿನ್ನಿಸುವ ಮುನ್ನ ಅದರಲ್ಲಿರುವ ಬೀಜಗಳನ್ನು ತೆಗೆಯುವುದನ್ನು ಮರೆಯಬೇಡಿ
ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಅಂಶವಿದ್ದು ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ, ಇದು ಶ್ವಾನಗಳಿಗೆ ಕಡಿಮೆ ಕ್ಯಾಲೊರಿಯ ಆಹಾರವಾಗಿದೆ
ಬ್ಲೂಬೆರ್ರಿಯಲ್ಲಿ ಆಂಟಿಆಕ್ಸಿಡೆಂಡ್‌ಗಳು ಇದ್ದು ನಿಮ್ಮ ಶ್ವಾನದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗಿದೆ
ಕಲ್ಲಂಗಡಿಯಲ್ಲಿ ವಿಟಮಿನ್ ಅಂಶ ಹೇರಳವಾಗಿದೆ. ನಿಮ್ಮ ಶ್ವಾನಕ್ಕೆ ತಿನ್ನಿಸುವ ಮುನ್ನ ಬೀಜಗಳನ್ನು ತೆಗೆದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಕೊಡಿ
ಅನಾನಸ್‌ನಲ್ಲಿ ಕೂಡಾ ವಿಟಮಿನ್ ಅಂಶ ಹೇರಳವಾಗಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಾಯಿಗೆ ತಿನ್ನಿಸುವ ಮುನ್ನ ಸಿಪ್ಪೆ ಹಾಗೂ ಮಧ್ಯದಲ್ಲಿರುವ ಗಟ್ಟಿ ಭಾಗವನ್ನು ತೆಗೆಯಿರಿ
ಗಮನಿಸಿ: ಶ್ವಾನಗಳಿಗೆ ಈ ಹಣ್ಣುಗಳನ್ನು ನೀಡುವ ಮುನ್ನ ಪಶುವೈದ್ಯರ ಬಳಿ ಹೆಚ್ಚಿನ ಸಲಹೆ ಪಡೆಯಿರಿ
ಅಲ್ಲು ಅರ್ಜುನ್ ಅಭಿನಯದ 10 ಸಿನಿಮಾಗಳ ಪಟ್ಟಿ ಇಲ್ಲಿದೆ ಗಮನಿಸಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ