ಟಿ20 ವಿಶ್ವಕಪ್ ಇತಿಹಾಸದಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದವರು!

By Prasanna Kumar P N
May 04, 2024

Hindustan Times
Kannada

2007 ಟಿ20 ವಿಶ್ವಕಪ್ : ಶಾಹೀದ್ ಅಫ್ರಿದಿ (ಪಾಕಿಸ್ತಾನ) - ಬ್ಯಾಟಿಂಗ್​ನಲ್ಲಿ 91 ರನ್, ಬೌಲಿಂಗ್​​ನಲ್ಲಿ 12 ವಿಕೆಟ್ ವಿಕೆಟ್ ಪಡೆದಿದ್ದರು.

2009 ಟಿ20 ವಿಶ್ವಕಪ್ : ತಿಲಕರತ್ನೆ ದಿಲ್ಶನ್ (ಶ್ರೀಲಂಕಾ) - 7 ಪಂದ್ಯಗಳಲ್ಲಿ 317 ರನ್ ಸಿಡಿಸಿದ್ದರು.

2010 ಟಿ20 ವಿಶ್ವಕಪ್ : ಕೆವಿನ್ ಪೀಟರ್ಸನ್ (ಇಂಗ್ಲೆಂಡ್) - 6 ಪಂದ್ಯಗಳಲ್ಲಿ 248 ರನ್ ಬಾರಿಸಿದ್ದರು.

2012 ಟಿ20 ವಿಶ್ವಕಪ್ : ಶೇನ್ ವಾಟ್ಸನ್ (ಆಸ್ಟ್ರೇಲಿಯಾ) - 6 ಪಂದ್ಯಗಳಲ್ಲಿ 249 ರನ್ ಚಚ್ಚಿದ್ದರು. ಹಾಗೇ 11 ವಿಕೆಟ್ ಸಹ ಪಡೆದಿದ್ದರು.

2014 ಟಿ20 ವಿಶ್ವಕಪ್ : ವಿರಾಟ್ ಕೊಹ್ಲಿ (ಭಾರತ) - 9 ಪಂದ್ಯಗಳಲ್ಲಿ 319 ರನ್ ಸಿಡಿಸಿದ್ದರು. 

2016 ಟಿ20 ವಿಶ್ವಕಪ್ : ವಿರಾಟ್ ಕೊಹ್ಲಿ (ಭಾರತ) - 5 ಪಂದ್ಯಗಳಲ್ಲಿ 273 ರನ್ ಕಲೆ ಹಾಕಿದ್ದರು. 

2021 ಟಿ20 ವಿಶ್ವಕಪ್ : ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 7 ಪಂದ್ಯಗಳಲ್ಲಿ 289 ರನ್ ಸಿಡಿಸಿದ್ದರು.

2022 ಟಿ20 ವಿಶ್ವಕಪ್ : ಸ್ಯಾಮ್ ಕರನ್ (ಇಂಗ್ಲೆಂಡ್) - 6 ಪಂದ್ಯಗಳಲ್ಲಿ 13 ವಿಕೆಟ್ ಉರುಳಿಸಿದ್ದರು. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ