ಕ್ರಿಕೆಟ್ ಅಕಾಡೆಮಿ ಹೊಂದಿರುವ ಭಾರತೀಯ ಕ್ರಿಕೆಟಿಗರು

By Jayaraj
Oct 22, 2024

Hindustan Times
Kannada

ಭಾರತೀಯರ ರಕ್ತದಲ್ಲಿ ಕ್ರಿಕೆಟ್‌ ಕಡೆಗಿನ ಒಲವು ಹೆಚ್ಚು. ಹೀಗಾಗಿ ಹೆಚ್ಚಿನ ಸಂಖ್ಯೆಯ ಯುವಕರು ಕ್ರಿಕೆಟಿಗರಾಗಲು ಬಯಸುತ್ತಾರೆ.

ಕ್ರಿಕೆಟ್‌ ಕಲಿಯುವ ಬಯಕೆ ಇರುವವರಿಗೆ ನೆರವಾಗಲು, ಭಾರತದ ಖ್ಯಾತ ಕ್ರಿಕೆಟಿಗರು ಸ್ಥಾಪಿಸಿರುವ ಕ್ರಿಕೆಟ್ ಅಕಾಡೆಮಿಗಳಿವೆ.

ಅಂತಹ ಕ್ರಿಕೆಟ್‌ ಅಕಾಡೆಮಿಗಳ ಬಗ್ಗೆ ನೋಡೋಣ.

ರವಿಚಂದ್ರನ್ ಅಶ್ವಿನ್ ಚೆನ್ನೈನಲ್ಲಿರುವ ಜೆನ್ ನೆಕ್ಸ್ಟ್ ಕ್ರಿಕೆಟ್ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ಯುಎಇ ಮತ್ತು ಯುಕೆಯಲ್ಲಿ ಇದರ ಕೇಂದ್ರಗಳಿವೆ.

ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ (MSDCA)ಯನ್ನು ಮಾಹಿ ಸ್ಥಾಪಿಸಿದ್ದಾರೆ. ಇದು 2017ರಲ್ಲಿ ಆರಂಭವಾಯ್ತು.

ಭಾರತದ ಮಾಜಿ ಕ್ರಿಕೆಟಿಗರಾದ ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಜಂಟಿಯಾಗಿ ಕ್ರಿಕೆಟ್ ಅಕಾಡೆಮಿ ಆಫ್ ಪಠಾನ್ಸ್ (CAP) ಆರಂಭಿಸಿದ್ದಾರೆ.

ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಸೆಹ್ವಾಗ್ ಕ್ರಿಕೆಟ್ ಅಕಾಡೆಮಿ (ಎಸ್‌ಸಿಎ) ನಡೆಸುತ್ತಿದ್ದಾರೆ.

ಹರ್ಭಜನ್ ಸಿಂಗ್ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (HSIC) ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ನೀಡುತ್ತದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ