ಎಂದಿಗಿಂತ ಈ ವಿಶೇಷ ದಿನದಂದು ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ
ಇಂದು ಬೆಳಗ್ಗೆ ಸುಮಾರು 11.58 ರಿಂದ 12.03ರ ಶುಭ ಸಮಯದಲ್ಲಿ ಸೂರ್ಯನ ರಶ್ಮಿಯು ಬಾಲರಾಮನ ವಿಗ್ರಹವನ್ನು ಸ್ಪರ್ಶಿಸಿತು
ಸೂರ್ಯನ ಕಿರಣಗಳು ಬಾಲರಾಮನ ಹಣೆಯನ್ನು ಸ್ಪರ್ಶಿಸುವ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಬೆಂಗಳೂರು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಆಪ್ಟಿಕ್ಸ್, ಅಲೈಡ್ ಇಂಜಿಯನಿರಿಂಗ್ ಹಾಗೂ ಸಿಬಿಆರ್‌ಐ ವಿಜ್ಞಾನಿಗಳು ಈ ವ್ಯವಸ್ಥೆಗೆ ಬಹಳ ಪ್ಲ್ಯಾನ್ ಮಾಡಿದ್ದರು.
ಇಡೀ ವ್ಯವಸ್ಥೆಯನ್ನು ಆಪ್ಟೋಮೆಕಾನಿಕಲ್ ವ್ಯವಸ್ಥೆ ಎಂದು ವಿಜ್ಞಾನಿ ಡಾ. ಪ್ರದೀಪ್ ಕುಮಾರ್ ರಾಮಚರ್ಲಾ ಹೇಳಿದ್ದಾರೆ.
ಪ್ರತಿ ವರ್ಷ ಶ್ರೀರಾಮ ನವಮಿಯಂದು ಸೂರ್ಯನ ಕಿರಣಗಳು ಬಾಲರಾಮನ ಹಣೆಯನ್ನು ಸ್ಪರ್ಶಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಅಯೋಧ್ಯೆ ರಾಮಮಂದಿರದಲ್ಲಿ ಜನ ಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಏಪ್ರಿಲ್ 15 ರಿಂದ 18ವರೆಗೆ ವಿಐಪಿ ದರ್ಶನವನ್ನು ನಿರಾಕರಿಸಲಾಗಿದೆ.