ಸೀರೆಯಲ್ಲಿ ಮನಸೂರೆಗೊಂಡ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

By Praveen Chandra B
Dec 12, 2024

Hindustan Times
Kannada

ರಶ್ಮಿಕಾ ಮಂದಣ್ಣ ಆಗಾಗ ಸೀರೆಯುಟ್ಟು ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾರೆ. ಅವರ ಸಾರಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ರಶ್ಮಿಕಾಗೆ ಸೀರೆಯೆಂದರೆ ಅಚ್ಚುಮೆಚ್ಚು. ಆಗಾಗ ಕೊಡಗಿನ ಸ್ಟೈಲ್‌ನಲ್ಲಿ ಸೀರೆಯನ್ನೂ ಉಡುತ್ತಾರೆ.

ಇತ್ತೀಚೆಗೆ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 1 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ.

ರಶ್ಮಿಕಾ ಮಂದಣ್ಣ ಭಾರತದ ಬಿಝಿ ನಟಿ ಎಂದು ಎಲ್ಲರಿಗೂ ಗೊತ್ತು. ಆಕೆಯ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಬಿಡುವಿಲ್ಲದಂತೆ ಶೂಟಿಂಗ್‌ನಲ್ಲಿ ಭಾಗವಹಿಸುತ್ತ ಇರುತ್ತಾರೆ.

ತೆಲುಗು ಮಾತ್ರವಲ್ಲದೆ, ತಮಿಳು, ಹಿಂದಿ ಚಿತ್ರರಂಗದಿಂದಲೂ ಇವರಿಗೆ ಸಾಕಷ್ಟು ಬೇಡಿಕೆಯಿದೆ.

ರಶ್ಮಿಕಾ ಮಂದಣ್ಣ ನಟನೆಯ ಕುಬೇರ, ಚಾವಾ, ದಿ ಗರ್ಲ್‌ ಫ್ರೆಂಡ್‌, ರೈನ್ಬೋ ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿದೆ.

ರಶ್ಮಿಕಾ ಮಂದಣ್ಣ ನಟನೆಯ ಕುಬೇರ, ಚಾವಾ, ದಿ ಗರ್ಲ್‌ ಫ್ರೆಂಡ್‌, ರೈನ್ಬೋ ಸಿನಿಮಾಗಳು ಇನ್ನೂ ಬಿಡುಗಡೆಯಾಗಬೇಕಿದೆ.

ಅನಿಮಲ್‌ ಸಿನಿಮಾದ ಮೂಲಕ ರಶ್ಮಿಕಾ ಬಾಲಿವುಡ್‌ನಲ್ಲಿ ಮಿಂಚಿದ್ದರು. ಇದಕ್ಕೂ ಮೊದಲು ಮಿಷನ್‌ ಮಂಜ್ನು, ವಾರಿಸು ಸಿನಿಮಾಗಳಲ್ಲಿ ನಟಿಸಿದ್ದರು.

ಗುಡ್‌ಬಾಯ್‌, ಸೀತಾ ರಾಮನ್‌, ಅಂದವಲ್ಲು ಮೀಕು ಜೋಹರ್ಲು, ಪುಷ್ಪ ದಿ ರೈಸ್‌ ಸಿನಿಮಾಗಳಲ್ಲಿ ನಟಿಸಿದ್ದರು. 

ಪುಷ್ಪ ಪಾನ್‌ ಇಂಡಿಯಾ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣರ ಖ್ಯಾತಿ ಹೆಚ್ಚಾಗಿತ್ತು.

2024ರಲ್ಲಿ ನಿಧನರಾದ ಕರ್ನಾಟಕದ ಪ್ರಮುಖರು