ಆರೋಗ್ಯಕರ ಬೀಟ್ರೂಟ್‌ ಕಾಂಜಿ: ಈ ಪಾನೀಯ ತಯಾರಿಸುವ ಸರಳ ವಿಧಾನ ಇಲ್ಲಿದೆ

Slurrp

By HT Kannada Desk
Nov 15, 2024

Hindustan Times
Kannada

ಬೀಟ್ರೂಟ್‌ ಕಾಂಜಿ: ಉತ್ತರ ಭಾರತದಲ್ಲಿ ಬೀಟ್ರೂಟ್‌ ಅನ್ನು ಹುದುಗಿಸಿ ತಯಾರಿಸುವ ಒಂದು ಸಾಂಪ್ರದಾಯಿಕ ಪಾನೀಯ. ಪ್ರೋಬಯಾಟಿಕ್‌ಗಳಿಂದ ಸಮೃದ್ಧವಾಗಿರುವ ಈ ಪಾನೀಯವನ್ನು ಬೀಟ್ರೂಟ್‌, ಸಾಸಿವೆ ಕಾಳು ಮತ್ತು ಮಸಾಲೆಗಳಿಂದ ತಯಾರಿಸಲಾಗುತ್ತದೆ. ಇದೊಂದು ರಿಫ್ರೆಶ್ಮೆಂಟ್‌ ಪಾನೀಯ.

Slurrp

ಬೇಕಾಗುವ ಪದಾರ್ಥಗಳು: ಬೀಟ್ರೂಟ್‌ 3–4, ಬಿಸಿ ನೀರು 8 ಕಪ್‌, ಅಚ್ಚ ಖಾರದ ಪುಡಿ 2 ಚಮಚ, ಹಳದಿ ಸಾಸಿವೆ 2 ಚಮಚ, ಉಪ್ಪು 1 ಚಮಚ (ರುಚಿಗೆ ತಕ್ಕಷ್ಟು)

Slurrp

ಹಂತ 1: ಬೀಟ್ರೂಟ್‌ ಅನ್ನು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ.

Slurrp

ಹಂತ 2: 8 ಕಪ್ ನೀರನ್ನು ಕುದಿಸಿ. ಅದಕ್ಕೆ ಕತ್ತರಿಸಿದ ಬೀಟ್ರೂಟ್‌ ಹೋಳುಗಳನ್ನು ಸೇರಿಸಿ 5–10 ನಿಮಿಷಗಳವರೆಗೆ ಕುದಿಸಿ. ನಂತರ ಕೋಣೆಯ ಉಷ್ಣಾಂಶಕ್ಕೆ ತಣ್ಣಗಾಗಲು ಬಿಡಿ.

Slurrp

ಹಂತ 3: ಈ ಮಿಶ್ರಣವನ್ನು ಒಂದು ಗ್ಲಾಸ್‌ ಜಾರ್‌ಗೆ ವರ್ಗಾಯಿಸಿಕೊಳ್ಳಿ. 

Slurrp

ಹಂತ 4: ಜಾರ್‌ಗೆ ಸಾಸಿವೆ, ಉಪ್ಪು ಮತ್ತು ಅಚ್ಚ ಖಾರದ ಪುಡಿ ಸೇರಿಸಿ.

Slurrp

ಹಂತ 5: ಒಂದು ಸ್ವಚ್ಛವಾದ ಒಣಗಿದ ಚಮಚ ತೆಗೆದುಕೊಂಡು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್‌ ಮಾಡಿ.

Slurrp

ಹಂತ 6: ಗ್ಲಾಸ್‌ ಜಾರ್‌ಗೆ ಮಸ್ಲಿನ್‌ ಬಟ್ಟೆ ಸುತ್ತಿ ಮುಚ್ಚಳ ಹಾಕಿ. ಅದನ್ನು 2–5 ದಿನಗಳ ಕಾಲ ಬಿಸಿಲಿನಲ್ಲಿಡಿ.‌

Slurrp

ಹಂತ 7: ಪ್ರತಿದಿನ ಮಿಶ್ರಣವನ್ನು ಮಿಕ್ಸ್‌ ಮಾಡಿ. ಬೀಟ್ರೂಟ್ ಕಾಂಜಿ ಚೆನ್ನಾಗಿ ಹುದುಗಿದ ನಂತರ ಅದನ್ನು ಫ್ರೀಜ್‌ನಲ್ಲಿಡಿ.

Slurrp

ಹಂತ 8: ರೋಗನಿರೋಧಕ ಶಕ್ತಿ ಹೆಚ್ಚಿಸುವ ಬೀಟ್ರೂಟ್‌ ಕಾಂಜಿಯನ್ನು ಋತುಮಾನಗಳ ಬದಲಾವಣೆ ಸಮಯದಲ್ಲಿ ಸವಿಯಿರಿ.

Slurrp

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ