ಪ್ರತಿ ಮಹಿಳೆಗೂ ತನ್ನ ಸಂಗಾತಿಯಿಂದ ಇರುವ 10 ನಿರೀಕ್ಷೆಗಳಿವು

By Jayaraj
May 06, 2024

Hindustan Times
Kannada

ಪ್ರತಿಯೊಬ್ಬ ವಿವಾಹಿತ ನಾರಿ ತನ್ನ ಗಂಡನಲ್ಲಿ ನಿರೀಕ್ಷೆಗಳ ಬೆಟ್ಟವನ್ನೇ ಹೊಂದಿರುತ್ತಾಳೆ. ಆ ಕುರಿತು ನೋಡೋಣ.

ಗುಣವಂತ ಸ್ತ್ರೀಗೆ ಪತಿಯ ಶ್ರೀಮಂತಿಕೆ ಬೇಕಾಗಿಲ್ಲ. ಬದಲಾಗಿ ಒಂದು ಬೊಗಸೆಯಷ್ಟು ಪ್ರೀತಿ, ಕೊಂಚ ಕಾಳಜಿ ತೋರಿದರೆ ಅದೇ ಆಕೆಗೆ ಸ್ವರ್ಗ.

ಪ್ರತಿ ವಿವಾಹಿತೆಯೂ ತನ್ನ ಪತಿ ತನ್ನ ನಡವಳಿಕೆಯನ್ನು ಎಂದಿಗೂ ಟೀಕಿಸಬಾರದು. ಬದಲಿಗೆ ಗೌರವಿಸಬೇಕು ಎಂದು ಬಯಸುತ್ತಾಳೆ.

ತನ್ನ ಸಂಗಾತಿಯು ತನ್ನೊಂದಿಗೆ ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಸಂಪರ್ಕದಲ್ಲಿರಬೇಕೆಂದು ಬಯಸುತ್ತಾಳೆ.

ಪತಿ ಸುಳ್ಳು ಹೇಳಬಾರದು ಎಂಬುದು ಹೆಣ್ಣಿನ ದೊಡ್ಡ ಆಸೆ. ಗಂಡ ಪ್ರಾಮಾಣಿಕನಾಗಿರಬೇಕೆಂದು ಆಕೆ ಬಯಸುತ್ತಾಳೆ.

ತನ್ನ ಪತಿ ಮನೆಕೆಲಸಗಳಲ್ಲಿ, ವಿಶೇಷವಾಗಿ ಅಡುಗೆಮನೆಯಲ್ಲಿ ಸಹಾಯ ಮಾಡಬೇಕೆಂದು ಖಂಡಿತವಾಗಿಯೂ ಹೆಣ್ಣು ನಿರೀಕ್ಷಿಸುತ್ತಾಳೆ.

ಸ್ನೇಹಿತೆಯರಿದ್ದರೆ, ಅವರನ್ನು ಭೇಟಿಯಾಗಲು ಅಥವಾ ಮಾತನಾಡಲು ಯಾವುದೇ ನಿರ್ಬಂಧ ಹೇರಬಾರದು ಎಂದು ಪತ್ನಿ ನಿರೀಕ್ಷಿಸುತ್ತಾಳೆ.

ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುವ ಗಂಡ ಸಿಗಬೇಕೆಂಬುದು ಆಕೆಯ ಬಯಕೆ. ಹೀಗಾಗಿ ಪತಿ ತುಂಬಾ ಗಂಭೀರವಾಗಿರಬಾರದು. ಸ್ವಲ್ಪ ತಮಾಷೆ ಮಾಡಬೇಕು ಎಂದು ಬಯಸುತ್ತಾಳೆ.

ಪ್ರತಿ ಹೆಂಡತಿಯೂ ತನ್ನ ಪತಿಯು ತನ್ನ ಮೇಕ್ಅಪ್, ಸೌಂದರ್ಯ ಮತ್ತು ಮಾಡುವ ಕೆಲಸಗಳನ್ನು ಹೊಗಳಬೇಕೆಂದು ನಿರೀಕ್ಷಿಸುತ್ತಾಳೆ.

pexels

ಪ್ರತಿ ಹೆಂಡತಿಯೂ ತನ್ನ ಸಂಗಾತಿಯೊಂದಿಗೆ ಜೊತೆಯಾಗಿ ಕಳೆದ ವಿಶೇಷ ಕ್ಷಣಗಳನ್ನು ನೆನಪಿಟ್ಟುಕೊಳ್ಳಬೇಕೆಂದು ಬಯಸುತ್ತಾಳೆ.

pexels

ಪ್ರತಿ ನಾರಿಯು ತನ್ನ ಗಂಡನಲ್ಲಿ ಅಪ್ಪನಂತೆ ಕಾಳಜಿ, ಅಮ್ಮನಂತೆ ಪ್ರೀತಿ, ಅಣ್ಣನಂತೆ ಅಕ್ಕರೆ, ತಮ್ಮನಂತೆ ತುಂಟತನ ಇರಬೇಕೆಂದು ಬಯಸುತ್ತಾಳೆ.

Pexels

ಕೆಕೆಆರ್‌ vs ಎಸ್‌ಆರ್‌ಎಚ್‌ ಮುಖಾಮುಖಿಯಲ್ಲಿ ಯಾರು ಬಲಿಷ್ಠ?