ಇದು ಏಳೇಳು ಜನುಮಗಳ ಅನುಬಂಧ, ಪತಿ-ಪತ್ನಿ ನಡುವೆ ಇರಲಿ ಪ್ರೀತಿ

By Priyanka Gowda
Sep 06, 2024

Hindustan Times
Kannada

ಮುಕ್ತ ಮತ್ತು ಪ್ರಾಮಾಣಿಕ ಸಂವಹನದ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಆಲೋಚನೆಗಳು, ಭಾವನೆಗಳು ಮತ್ತು ಕಾಳಜಿಗಳನ್ನು ನಿಯಮಿತವಾಗಿ ಹಂಚಿಕೊಳ್ಳಿ.

ಸಂಗಾತಿಯ ಉತ್ತಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ. ಕೃತಜ್ಞತೆಯ ಸರಳ ಸನ್ನೆಗಳು ನಿಮ್ಮ ಬಂಧವನ್ನು ಬಲಪಡಿಸಬಹುದು ಮತ್ತು ನೀವು ಪರಸ್ಪರ ಗೌರವಿಸುತ್ತೀರಿ ಎಂದು ತೋರಿಸುತ್ತದೆ.

ಇಬ್ಬರೂ ಆನಂದಿಸುವ ಚಟುವಟಿಕೆಗಳಲ್ಲಿ ಒಟ್ಟಿಗೆ ಸಮಯ ಕಳೆಯಲು ಆದ್ಯತೆ ನೀಡಿ. ಗುಣಮಟ್ಟದ ಸಮಯವು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ.

ಪರಸ್ಪರರ ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಪ್ರೋತ್ಸಾಹಿಸಿ ಮತ್ತು ಬೆಂಬಲಿಸಿ. ಯಶಸ್ಸು ಮತ್ತು ಸವಾಲುಗಳೆರಡರಲ್ಲೂ ಸಂಭ್ರಮವಿರಲಿ.

ದಾಂಪತ್ಯದಲ್ಲಿ ಜಗಳ ಸಾಮಾನ್ಯ. ತಪ್ಪಿದ್ದಾಗ ಕ್ಷಮೆ ಕೇಳಿ, ದ್ವೇಷ ಬಿಡಿ. ಹಿಂದಿನ ತಪ್ಪುಗಳು ಮತ್ತೆ ಮರುಕಳಿಸದಿರಲಿ.

ಕೈಗಳನ್ನು ಹಿಡಿದುಕೊಳ್ಳುವುದು, ತಬ್ಬಿಕೊಳ್ಳುವುದು ಮತ್ತು ಮುದ್ದಾಡುವುದು ಮುಂತಾದ ದೈಹಿಕ ಸ್ಪರ್ಶವು ಅನ್ಯೋನ್ಯತೆಯನ್ನು ಬೆಸೆಯುತ್ತದೆ.

ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಿ. ದುಃಖವಾದಾಗ ಸಾಂತ್ವಾನ, ಕಾಳಜಿ ಇರಲಿ. ಇದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. 

ಇಬ್ಬರೂ ವಿಭಿನ್ನ ಅಭಿಪ್ರಾಯಗಳು ಮತ್ತು ಆಸಕ್ತಿಗಳನ್ನು ಹೊಂದಿರುವುದು ಸಹಜ. ಹೀಗಾಗಿ ಪರಸ್ಪರರ ಮಾತು, ಆಸಕ್ತಿಗಳನ್ನು ಗೌರವಿಸಿ.

freepik

ದಾಂಪತ್ಯ ಜೀವನದಲ್ಲಿ ಪ್ರೀತಿ, ಪ್ರೇಮ, ಪ್ರಣಯವಿರಲಿ. ಕ್ಯಾಂಡಲ್ ಲೈಟ್ ಡಿನ್ನರ್, ಆಶ್ಚರ್ಯಕರ ಉಡುಗೊರೆ ಇತ್ಯಾದಿಗಳನ್ನು ನೀಡಿ ಸಂಗಾತಿಯನ್ನು ಖುಷಿಪಡಿಸಿ.  

freepik

ಬದುಕಿನಲ್ಲಿ ಬೇಸರವೇ ಆಗದೆ ಸದಾ ಖುಷಿಯಿಂದ ಇರಬೇಕು ಅಂದ್ರೆ ನೀವು ಮಾಡಬೇಕಾಗಿದ್ದಿಷ್ಟು