ಹಿಂಗ್ಲಾಜ್ ದೇವಾಲಯ: ಇದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿದೆ. ವಿಶ್ವದ 52 ಶಕ್ತಿಪೀಠಗಳಲ್ಲಿ ಇದೂ ಒಂದು. ಇದನ್ನು ನಾನಿ ಮಂದಿರ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಹಿಂಗ್ಲಾಜ ಯಾತ್ರೆ ನಡೆಯುತ್ತದೆ.
Tripadvisor
ಕಟಾಸ್ ರಾಜ್ ದೇವಾಲಯ: ಕಟಾಸ್ ರಾಜ್ ದೇವಾಲಯವನ್ನು ಕಿಲಾ ಕಟಾಸ್ ಎಂದೂ ಕರೆಯುತ್ತಾರೆ. ಪಾಕಿಸ್ತಾನದ ಪಂಜಾಬ್‌ನಲ್ಲಿದೆ ಈ ದೇವಾಲಯ. ಇದು ಶಿವನ ದೇಗುಲವಾಗಿದೆ.
Times of India
ಉಮರ್‌ಕೋಟ್ ದೇವಾಲಯ: ಉಮರ್‌ಕೋಟ್ ಶಿವ ದೇವಾಲಯವು ಉಮರ್‌ಕೋಟ್ ಜಿಲ್ಲೆಯಲ್ಲಿದೆ. ಇದನ್ನು ಅಮರ್‌ಕೋಟ್ ಶಿವ ಮಂದಿರ ಎಂದೂ ಕರೆಯಲಾಗುತ್ತದೆ. ಸಿಂಧ್ ಪ್ರಾಂತ್ಯದ ಅತ್ಯಂತ ಹಳೆಯ ದೇಗುಲವಿದು.
Wikipedia
ಸ್ವಾಮಿ ನಾರಾಯಣ ದೇವಾಲಯ: ಇದು ಪಾಕಿಸ್ತಾನದ ಅತಿ ದೊಡ್ಡ ದೇಗುಲವೂ ಹೌದು. ಕರಾಚಿಯಲ್ಲಿರುವ ಈ ದೇಗುಲದಲ್ಲಿರುವ ಮೂಲ ದೇವರ ವಿಗ್ರಹವನ್ನು ಅಲ್ಲಿಂದ ಭಾರತಕ್ಕೆ ತರಲಾಗಿದೆ.
Wikipedia
ವರುಣದೇವ ದೇವಾಲಯ: ಕರಾಚಿಯ ಮನೋರಾ ದ್ವೀಪದಲ್ಲಿದೆ ಈ ದೇವಾಲಯ. 160 ವರ್ಷಗಳಷ್ಟು ಹಳೆಯ ದೇಗುಲ ಇದಾಗಿದೆ. ಸುಂದರ ವಾಸ್ತುಶಿಲ್ಪದಿಂದ ಹೆಸರು ಪಡೆದ ದೇವಾಲಯ ಇದಾಗಿದೆ.
Wikipedia
ಪಂಚಮುಖಿ ಹನುಮಾನ್ ದೇಗುಲ: ಈ ದೇವಾಲಯವು ಕರಾಚಿಯ ಸೋಲ್ಜರ್ ಬಜಾರ್‌ನಲ್ಲಿದೆ. ಇದು 1500 ವರ್ಷಗಳ ಹಳೆಯ ದೇವಾಲಯವಾಗಿದೆ.