ಈ ವರ್ಷ ರಾಮನವಮಿ ಯಾವಾಗ, ಪೂಜಾ ವಿಧಿ ವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ

By Reshma
Jan 22, 2024

Hindustan Times
Kannada

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾ ಮಹೂರ್ತದ ಕ್ಷಣ ಸಮೀಪಿಸಿದೆ. ದೇಶದಾದ್ಯಂತ ಜನರು ಅಯೋಧ್ಯೆಯತ್ತ ದೃಷ್ಟಿ ನೆಟ್ಟಿದ್ದಾರೆ. ಎಲ್ಲೆಲ್ಲೋ ರಾಮನ ಜಪವೇ ಕೇಳಿ ಬರುತ್ತಿದೆ. 

ಶ್ರೀರಾಮನು ತ್ರೇತಾಯುಗದಲ್ಲಿ ಚೈತ್ರಮಾಸದ ಶುಕ್ಲ ಪಕ್ಷ ನವಮಿಯಂದು ಜನಿಸಿದನು. ರಾಮನ ಜನ್ಮದಿನವನ್ನು ಪ್ರತಿ ವರ್ಷ ರಾಮನವಮಿ ಎಂದು ಆಚರಿಸಲಾಗುತ್ತದೆ. 

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಈ ಹೊತ್ತಿನಲ್ಲಿ ಈ ವರ್ಷ ಅಂದರೆ 2024ರಲ್ಲಿ ರಾಮನವಮಿ ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ. 

ಚೈತ್ರ ಮಾಸ ಶುಕ್ಲ ಪಕ್ಷ ನವಮಿ ತಿಥಿಯು ಏಪ್ರಿಲ್‌  16ರ ಮಧ್ಯಾಹ್ನ 1.23ರಿಂದ ಆರಂಭವಾಗಲಿದೆ. ಇದು ಏಪ್ರಿಲ್‌ 17 ರಂದು ಮಧ್ಯಾಹ್ನ 3.14ರವರೆಗೆ ಇರುತ್ತದೆ. 

ಉದಯ ತಿಥಿಯ ಆಧಾರದ ಮೇಲೆ ಏಪ್ರಿಲ್‌ 17ರ ಬುಧವಾರ ರಾಮನವಮಿ ಆಚರಣೆ ಇರುತ್ತದೆ. 

ಶ್ರೀರಾಮನು ರಾಮನವಮಿಯಂದು ಮಧ್ಯಾಹ್ನ ಜನಿಸಿದನು. ಆದ್ದರಿಂದ ಪೂಜೆಯ ಶುಭ ಸಮಯವು ಬೆಳಿಗ್ಗೆ 11.08 ರಿಂದ ಮಧ್ಯಾಹ್ನ 1.36ರವರೆಗೆ ಇರುತ್ತದೆ. 

ರಾಮನಮವಿಯಂದು ಶ್ರೀರಾಮನನ್ನು ಪೂಜಿಸುವುದರಿಂದ ನಮ್ಮೆಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಕೀರ್ತಿ, ಸಂಪತ್ತು, ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಪೂಜಾವಿಧಾನ: ಈ ದಿನ ಹಳದಿ ಹೂಗಳು ಹಾಗೂ ವಸ್ತ್ರವನ್ನು ಶ್ರೀರಾಮನಿಗೆ ಅರ್ಪಿಸಬೇಕು. ಶ್ರೀಗಂಧ ಇತ್ಯಾದಿ ಪೂಜಾ ಸಾಮಗ್ರಿಯನ್ನು ದೇವರಿಗೆ ಅರ್ಪಿಸಬೇಕು. ತುಳಸಿ ಎಲೆ ಸೇರಿಸಿ ನೈವೇದ್ಯ ಮಾಡಬೇಕು. 

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna