ಅವಿವಾ ಬಿದ್ದಪ್ಪ- ಅಭಿಷೇಕ್‌ ಅಂಬರೀಶ್‌ಗೆ ಪರ್ಫೆಕ್ಟ್‌ ಜೋಡಿ ಎಂದ ಫ್ಯಾನ್ಸ್‌

By Praveen Chandra B
Dec 23, 2024

Hindustan Times
Kannada

ಅವಿವಾ ಬಿದ್ದಪ್ಪ ತನ್ನ ಪತಿ ಅಭಿಷೇಕ್‌ ಅಂಬರೀಶ್‌ ಜತೆಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಫೋಟೋಗಳ ಜತೆಗೆ "ಎಲ್ಲರಿಗೂ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳು" ಎಂದು ಶುಭಕೋರಿದ್ದಾರೆ. 

ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸುಂದರ ಜೋಡಿ, ಪರ್ಫೆಕ್ಟ್‌ ಜೋಡಿ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. 

ಅಭಿಷೇಕ್‌ ಅಂಬರೀಶ್‌ ಅವರು ಕಳೆದ ವರ್ಷ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿದ್ದರು. 

ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರ ಶುಭವಿವಾಹ ಜೂನ್‌ 5, 2023ರಂದು ಅದ್ಧೂರಿಯಾಗಿ ನಡೆದಿತ್ತು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಿಸೆಪ್ಷನ್‌ ನಡೆದಿತ್ತು.

ಅಭಿಷೇಕ್‌ ಅವರು ವಿದೇಶದಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವಿವಾರನ್ನು ಲವ್‌ ಮಾಡಿದ್ದರು. ಬಳಿಕ ಕುಟುಂಬದ ಒಪ್ಪಿಗೆ ಪಡೆದು ವಿವಾಹವಾಗಿದ್ದರು.

 ಅವಿವಾ ಬಿದ್ದಪ್ಪ ಜನಪ್ರಿಯ ಫ್ಯಾಷನ್‌ ಡಿಸೈನರ್‌. ಇವರು ಪ್ರಸಾದ್‌ ಬಿದ್ದಪ್ಪ ಮಗಳು. ಲಂಡನ್‌ ಅಕಾಡೆಮಿ ಆಫ್‌ ಮ್ಯೂಸಿಕ್‌ ಆಂಡ್‌ ಡ್ರಾಮ್ಯಾಟಿಕ ಆರ್ಟ್‌ನಲ್ಲಿ ಶಿಕ್ಷಣ ಪಡೆಯುವ ವೇಳೆ ಅಲ್ಲೇ ಇವರಿಗೆ ಅಭಿಷೇಕ್‌ ಅಂಬರೀಶ್‌ ಜತೆ ಲವ್‌ ಆಗಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಿದ ಪಾಕಿಸ್ತಾನ ತಂಡ