ನಟಿ ಚೈತ್ರಾ ಜೆ ಆಚಾರ್ ಮುಂಬರುವ ಸಿನಿಮಾಗಳು ಯಾವುವು?
By Praveen Chandra B
Nov 19, 2024
Hindustan Times
Kannada
ಕನ್ನಡ ನಟಿ ಚೈತ್ರಾ ಆಚಾರ್ ಈಗಾಗಲೇ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಮಹಿರಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು.
ಆ ದೃಶ್ಯ ಸಿನಿಮಾದಲ್ಲಿ ಆಶಾ ಪಾತ್ರದಲ್ಲಿ, ಗಿಲ್ಕಿಯಲ್ಲಿ ನ್ಯಾನ್ಸಿಯಾಗಿ ಕಾಣಿಸಿಕೊಂಡಿದ್ದರು.
ತಲೆದಂಡ ಸಿನಿಮಾದಲ್ಲಿ ಸಖಿಯಾಗಿ ಸೆಳೆದಿದ್ದರು. ಟೋಬಿ ಸಿನಿಮಾದಲ್ಲಿ ಜೆನ್ನಿ ಪಾತ್ರದಲ್ಲಿ ಮಿಂಚಿದ್ದರು.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ಸುರಭಿಯಾಗಿ ಪ್ಯಾನ್ ಇಂಡಿಯಾ ಗಮನ ಸೆಳೆದಿದ್ದರು.
ಬ್ಲಿಂಕ್, ಹ್ಯಾಪಿ ಮ್ಯಾರಿಡ್ ಲೈಫ್ ಸಿನಿಮಾಗಳಲ್ಲಿ ನಟಿಸಿದ್ದರು. ಇವರ ಮುಂಬರುವ ಸಿನಿಮಾಗಳ ವಿವರ ಮುಂದೆ ಇದೆ.
ಮಾರ್ನಮಿ: ರಿಷಿತ್ ಶೆಟ್ಟಿ ನಿರ್ದೇಶನದ ಮಾರ್ನಮಿ ಸಿನಿಮಾದಲ್ಲಿ ಚೈತ್ರಾ ಆಚಾರ್ ನಾಯಕಿಯಾಗಿದ್ದಾರೆ.
ಉತ್ತರಕಾಂಡ: ದಿಗಂತ್, ಧನಂಜಯ್, ಐಶ್ವರ್ಯ ರಂಗರಾಜ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಜತೆ ನಟಿಸುತ್ತಿದ್ದಾರೆ.
ತಮಿಳು ಸಿನಿಮಾ: ಕನ್ನಡ ಮಾತ್ರವಲ್ಲದೆ ಕಾಲಿವುಡ್‌ನ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ರಾಜು ಮುರುಗನ್ ನಿರ್ದೇಶನದ ಸಿನಿಮಾದಲ್ಲಿ ಶಶಿಕುಮಾರ್ ಜತೆ ನಟಿಸಲಿದ್ದಾರೆ.
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ