ಮನುಷ್ಯರಿಗೂ ಮುನ್ನ ಬಾಹ್ಯಾಕಾಶಕ್ಕೆ ಹಾರಿದ 5 ಪ್ರಾಣಿಗಳು

Pexels

By Jayaraj
Sep 26, 2024

Hindustan Times
Kannada

ಮನುಷ್ಯರು ಅಂತರಿಕ್ಷಕ್ಕೆ ಹಾರುವ ಮೊದಲು ಪ್ರಾಣಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು ಎಂಬ ವಿಷಯ ನಿಮಗೆ ಗೊತ್ತೇ? 

Pexels

ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಐದು ಅಪರೂಪದ ಪ್ರಾಣಿಗಳ ಕುರಿತು ತಿಳಿಯೋಣ.

Pexels

ಮಾಸ್ಕೋದ ಬೀದಿ ನಾಯಿ ಲೈಕಾ 1957ರಲ್ಲಿ ಸೋವಿಯತ್ ಬಾಹ್ಯಾಕಾಶ ನೌಕೆ ಸ್ಪುಟ್ನಿಕ್ 2ರಲ್ಲಿ ಭೂಮಿಯನ್ನು ಸುತ್ತಿದ ಮೊದಲ ಪ್ರಾಣಿಯಾಗಿದೆ. ಆದರೆ ಅದು ಜೀವಂತವಾಗಿ ಮರಳಲಿಲ್ಲ.

NASA

1947ರಲ್ಲಿ, ಹಣ್ಣಿನಲ್ಲಿರುವ ನೊಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ಅಧ್ಯಯನ ಮಾಡಲು ಅವುಗಳನ್ನು ಯುಎಸ್ ರಾಕೆಟ್‌ನಲ್ಲಿ ಇಟ್ಟು ಉಡಾವಣೆ ಮಾಡಲಾಯಿತು.

NASA

ಹ್ಯಾಮ್ ಹೆಸರಿನ ಚಿಂಪಾಂಜಿ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಜಿಂಪಾಂಜಿ. 1961ರಲ್ಲಿ, ಬಾಹ್ಯಾಕಾಶ ಪ್ರಯಾಣದ ವೇಳೆ ಮಾನವರು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ತಿಳಿಯಲು ಇದು ನಾಸಾಗೆ ಸಹಾಯ ಮಾಡಿತು.

NASA

ಫೆಲಿಸೆಟ್ ಎಂಬ ಫ್ರೆಂಚ್ ಬೆಕ್ಕು 1963ರಲ್ಲಿ ಬಾಹ್ಯಾಕಾಶಕ್ಕೆ ಹೋಯಿತು. ಅಂತರಿಕ್ಷ ಪ್ರಯಾಣದಲ್ಲಿ ಬದುಕಿದ ಮೊದಲ ಮತ್ತು ಏಕೈಕ ಬೆಕ್ಕು ಇದು.

NASA

1968ರಲ್ಲಿ, ಸೋವಿಯತ್ ಒಕ್ಕೂಟವು ಝೋಂಡ್ 5 ಮಿಷನ್‌ನಲ್ಲಿ ಚಂದ್ರನ ಸುತ್ತ ಸುತ್ತಲು ಎರಡು ಆಮೆಗಳನ್ನು ಕಳುಹಿಸಿತು. ಚಂದ್ರನನ್ನು ಸುತ್ತಿ ಭೂಮಿಗೆ ಹಿಂದಿರುಗಿದ ಮೊದಲ ಪ್ರಾಣಿಗಳಲ್ಲಿ ಇವು ಕೂಡಾ ಸೇರಿವೆ.

NASA

ಮಾನವರನ್ನು ಕಳುಹಿಸುವ ಮೊದಲು, ವಿಜ್ಞಾನಿಗಳು ಜೀವಂತ ಜೀವಿಗಳನ್ನು ಕಳುಹಿಸುವ ಮೂಲಕ ಬಾಹ್ಯಾಕಾಶದ ಕಠಿಣ ಪರಿಸ್ಥಿತಿಯಲ್ಲಿ ಬದುಕಬಲ್ಲವು ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದರು.

Pexels

ಬಾಹ್ಯಾಕಾಶ ಪ್ರಯಾಣದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು ಪ್ರಾಣಿಗಳು ಅವರಿಗೆ ಸಹಾಯ ಮಾಡಿತು.

Pexels

ಈ ಕಾರ್ಯಾಚರಣೆಗಳಿಂದ, ವಿಜ್ಞಾನಿಗಳು ಬಾಹ್ಯಾಕಾಶವು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಲಿತರು.

NASA

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!