ಶೂಟರ್ ಮನು ಭಾಕರ್, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದರು. 10 ಮೀ ಏರ್ ಪಿಸ್ತೂಲ್ ಬಳಿಕ, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 2ನೇ ಪದಕ ಗೆದ್ದರು.
ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಏಕೈಕ ಭಾರತೀಯೆ ಮನು ಭಾಕರ್.
ಪಿಸ್ತೂಲ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣದಿಂದಾಗಿ ಮನು 2020ರ ಟೋಕಿಯೊ ಒಲಿಂಪಿಕ್ಸ್‌ನಿಂದ ಹೊರಗುಳಿದಿದ್ದರು. ಆದರೆ, ಅದರಿಂದ ಮನು ಧೃತಿಗೆಡಲಿಲ್ಲ.
ತಮಗೆ ತಾವೇ ಪ್ರೇರಣೆಯಾದ ಮನು, ತಮ್ಮ ಕತ್ತಿನ ಹಿಂಭಾಗದಲ್ಲಿ 'ಸ್ಟಿಲ್ ಐ ರೈಸ್' ಎಂಬ ಹಚ್ಚೆ ಹಾಕಿಸಿಕೊಂಡನು.
ಟ್ಯಾಟೂ ಕುರಿತಾಗಿ ಕಳೆದ ವರ್ಷ ಮನು ಮಾತನಾಡಿದ್ದರು. 'ಸ್ಟಿಲ್ ಐ ರೈಸ್' ಪದಗಳಿಗೂ ನನಗೂ ಸಂಬಂಧವಿದೆ. ಇದು ನನ್ನ ಶೂಟಿಂಗ್ ವೃತ್ತಿಜೀವನದ ಸಾರವೂ ಆಗಿದೆ. 'ಸ್ಟಿಲ್ ಐ ರೈಸ್' ನನಗೆ ಸ್ಫೂರ್ತಿದಾಯಕ ಎಂದಿದ್ದರು.
ಆಗಾಗ ಟ್ಯಾಟೂವನ್ನು ನೋಡುತ್ತಿದ್ದರೆ ನನಗೆ ಬೇಸರವಾಗಬಹುದು. ಹೀಗಾಗಿ ಕುತ್ತಿಗೆಯ ಹಿಂಭಾಗದಲ್ಲಿ ಹಾಕಿಸಿಕೊಂಡಿದ್ದಾಗಿ ಮನು ಹೇಳಿಕೊಂಡಿದ್ದರು.
ಸ್ಟಿಲ್ ಐ ರೈಸ್ - ಇದು ಕೇವಲ ಪದಗಳಲ್ಲ. ಕಷ್ಟದ ಸಮಯದಲ್ಲಿ ತನ್ನನ್ನು ತಾನು ಸಾಬೀತುಪಡಿಸುವ ಒಂದು ಮಾರ್ಗ ಮತ್ತು ಸ್ಫೂರ್ತಿ.
ಕವಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಮಾಯಾ ಏಂಜೆಲೋ ಅವರ ಕವಿತೆಯಿಂದ 'ಸ್ಟಿಲ್ ಐ ರೈಸ್' ಹಚ್ಚೆ ಹಾಕಿಸಿಕೊಳ್ಳಲು ಮನು ಭಾಕರ್ ಸ್ಫೂರ್ತಿ ಪಡೆದಿದ್ದಾರೆ.
ತೂಕ ಇಳಿಕೆಯಿಂದ ತ್ವಚೆಯ ಕಾಳಜಿಯವರೆಗೆ: ಮೊಳಕೆ ಕಾಳುಗಳ ಪ್ರಯೋಜನಗಳಿವು