ಸ್ಮಾರ್ಟ್‌ಫೋನ್‌ ಸುರಕ್ಷತೆ: ಮೊಬೈಲ್‌ನಲ್ಲಿ ಸ್ಪೈವೇರ್‌ ಇದೆಯೇ ಪರಿಶೀಲಿಸಿ

By Praveen Chandra B
Nov 27, 2024

Hindustan Times
Kannada

ನಿಮ್ಮ ಮೊಬೈಲ್‌ ಫೋನ್‌ಗೆ ಸ್ಪೈವೇರ್‌ ದಾಳಿಯಾಗಿದ್ದರೆ ಅದರ ಪರ್ಫಾಮೆನ್ಸ್‌ ಮೇಲೆ ಪರಿಣಾಮ ಬೀರುತ್ತದೆ. ಸ್ಮಾರ್ಟ್‌ಫೋನ್‌ ಸ್ಲೋ ಆಗುತ್ತದೆ, ಹೆಚ್ಚು ಬಿಸಿಯಾಗುತ್ತದೆ, ಬ್ಯಾಟರಿ ಬೇಗ ಖಾಲಿಯಾಗುತ್ತದೆ, ಅನವಶ್ಯಕ ಪಾಪ್‌ಅಪ್‌ಗಳು ಬರುತ್ತವೆ. ನಿಮಗೆ ಪರಿಚಯ ಇಲ್ಲದ ಆಪ್‌ಗಳು ಇನ್‌ಸ್ಟಾಲ್‌ ಆಗಿರುತ್ತವೆ.

ಫೋನ್‌ ಕರೆಯಲ್ಲಿ ಮಾತನಾಡುವಾಗ ವಿಚಿತ್ರ ಸದ್ದು ಬರುತ್ತಿದ್ದರೆ ಕೂಡ ಸ್ಪೈವೇರ್‌ ಇರುವ ಸಾಧ್ಯತೆಯನ್ನು ಸೂಚಿಸುತ್ತದೆ. ನಿಮ್ಮ ಫೋನ್‌ನಲ್ಲಿ ಈ ಸ್ಪೈವೇರ್‌ ಕಾಲ್‌ ರೆಕಾರ್ಡ್‌ ಮಾಡುತ್ತಿರಬಹುದು.

ಕೆಲವೊಮ್ಮೆ ನಿಮ್ಮ ಫೋನ್‌ ವಿಚಿತ್ರ ವರ್ತನೆ ತೋರಬಹುದು. ಅಂದರೆ, ಸಡನ್‌ ಆಫ್‌ ಆಗುವುದು, ಸಡನ್‌ ಸ್ಲೀಪ್‌ ಮೋಡ್‌ಗೆ ಹೋಗುವುದು ಇತ್ಯಾದಿ ವರ್ತನೆ ತೋರಿದರೆ ಫೋನ್‌ನಲ್ಲಿ ಏನೋ ನಡೆಯುತ್ತಿದೆ ಎಂದು ತಿಳಿಯಿರಿ.

ಅಪರಿಚಿತ ಆಪ್‌ಗಳು ಇವೆಯೇ ಎಂದು ಪರಿಶೀಲನೆ ನಡೆಸಿ. ಪವರ್‌ ಆಫ್‌ ಬಟನ್‌ ಒತ್ತಿ ಹಿಡಿಯಿರಿ. ಸೇಫ್‌ ಮೋಡ್‌ ಆಯ್ಕೆ ಕಾಣಿಸುತ್ತದೆ. ಸೇಫ್‌ ಮೋಡ್‌ನಲ್ಲಿ ಸೆಟ್ಟಿಂಗ್‌ಗೆ ಹೋಗಿ, ಅಲ್ಲಿರುವ ಆಪ್‌ಗಳನ್ನು ಪರಿಶೀಲನೆ ನಡೆಸಿ. 

ಯಾವುದಾದರೂ ಅಪರಿಚಿತ ಆಪ್‌ಗಳು ಕಂಡರೆ ಅದನ್ನು ಅನ್‌ ಇನ್‌ಸ್ಟಾಲ್‌ ಮಾಡಿ. ಎಲ್ಲಾ ಇಂತಹ ಅಪರಿಚಿತ ಆಪ್‌ ಅನ್‌ಇನ್‌ಸ್ಟಾಲ್‌ ಮಾಡಿದ ಬಳಿಕ ಸೇಫ್‌ ಮೋಡ್‌ನಿಂದ (ಮೊಬೈಲ್‌ ರಿಸ್ಟಾರ್ಟ್‌ ಮಾಡುವ ಮೂಲಕ) ಹೊರಕ್ಕೆ ಬನ್ನಿ.

ಸ್ಪೈವೇರ್‌ ವಿರೋಧಿ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿ. ಅಂದರೆ, ಅವಾಸ್ತ್‌, ನೋರ್ಟನ್‌ 360, ಕಾಸ್ಪರ್‌ಸ್ಕೈ, ಮೆಕಾಫಿ ಅಥವಾ ಎವಿಜಿಯಂತಹ ಆಂಟಿವೈರಸ್‌ ಇನ್‌ಸ್ಟಾಲ್‌ ಮಾಡಿ.

User Authentication ಎಂಬ ಫೀಚರ್‌ ಅನ್ನು ಎಲ್ಲರೂ ಈಗ ಬಳಸಬೇಕು. ಮೊಬೈಲ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳಲ್ಲಿಯೂ ಬಳಕೆದಾರರ ದೃಢೀಕರಣ ಆಯ್ಕೆಯನ್ನು ಸಕ್ರೀಯಗೊಳಿಸಿ.

ಮೊಬೈಲ್‌ನ ಸೆಟ್ಟಿಂಗ್‌ಗೆ ಹೋಗಿ ಇತ್ತೀಚಿನ ಸಾಫ್ಟ್‌ವೇರ್‌ ಅಪ್‌ಡೇಟ್‌ ಇದ್ದರೆ ಅಪ್‌ಡೇಟ್‌ ಮಾಡಿ. ಇದೇ ರೀತಿ ಮೊಬೈಲ್‌ನಲ್ಲಿರುವ ಆಪ್‌ಗಳು ಸದಾ ಅಪ್‌ಡೇಟ್‌ ಆಗಿರಲಿ.

ಆನ್‌ಲೈನ್‌ನಲ್ಲಿ ಪಾಸ್ವರ್ಡ್‌ ಮ್ಯಾನೇಜರ್‌ ಎಂಬ ಆಯ್ಕೆ ದೊರಕುತ್ತದೆ. ಅದು ನಿಮಗೆ ಕಠಿಣ ಪಾಸ್‌ವರ್ಡ್‌ ಸಿದ್ಧಪಡಿಸಿಕೊಡುತ್ತದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ