ಆರ್​​ಸಿಬಿಗೆ ಟ್ರೋಫಿ ಗೆದ್ದುಕೊಟ್ಟ ಸ್ಮೃತಿ ಮಂಧಾನ ಆಸ್ತಿ ಎಷ್ಟಿದೆ?

By Prasanna Kumar P N
Mar 23, 2024

Hindustan Times
Kannada

ಡಬ್ಲ್ಯುಪಿಎಲ್​ನಲ್ಲಿ ಆರ್​ಸಿಬಿ ಮಹಿಳಾ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದು ಕೋಟ್ಯಂತರ ಅಭಿಮಾನಿಗಳ ಕನಸು ನನಸು ಮಾಡಿದೆ.

ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡಲು ಅಪಾರ ಕೊಡುಗೆ ನೀಡಿದ್ದಾರೆ. 

ನಿಮಗಿದು ಗೊತ್ತಾ ಸ್ಮೃತಿ ಮಂಧಾನ ಆಸ್ತಿ ಮೌಲ್ಯ ಕೋಟಿಗಳಲ್ಲಿ ಇದೆ. ವರದಿಗಳ ಪ್ರಕಾರ ಮಂಧಾನ ಆಸ್ತಿ ಮೌಲ್ಯ 33.2 ಕೋಟಿ ಇದೆ. 

ಭಾರತದ ಎರಡನೇ ಶ್ರೀಮಂತ ಮಹಿಳಾ ಆಟಗಾರ್ತಿಯಾಗಿದ್ದಾರೆ. ಮಿಥಾಲಿ ರಾಜ್ (5 ಮಿಲಿಯನ್ ಡಾಲರ್) ಅಗ್ರಸ್ಥಾನದಲ್ಲಿದ್ದಾರೆ.

ಇನ್ನು ವಿಶ್ವದ ಶ್ರೀಮಂತ ಮಹಿಳಾ ಕ್ರಿಕೆಟಿಗರ ಪಟ್ಟಿಯಲ್ಲಿ ಮಂಧಾನ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ಎಲ್ಲಿಸ್ ಪೆರಿ ಇದ್ದಾರೆ.

ಡಬ್ಲ್ಯಪಿಎಲ್​ನಿಂದ 3.4 ಕೋಟಿ, ಬಿಸಿಸಿಐನಿಂದ ವಾರ್ಷಿಕ ವೇತನ 50 ಲಕ್ಷ, ಹಂಡ್ರೆಡ್ ಲೀಗ್​ನಿಂದ 62 ಲಕ್ಷಕ್ಕೂ ಅಧಿಕ ವೇತನ ಪಡೆಯಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​​ನ ಪಂದ್ಯಗಳಲ್ಲಿ ಶುಲ್ಕವೂ ಸಿಗಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 15 ಲಕ್ಷ, ಟಿ20 3 ಲಕ್ಷ, ಒಡಿಐ ಕ್ರಿಕೆಟ್‌ನಲ್ಲಿ 6 ಲಕ್ಷ ಪಂದ್ಯದ ಶುಲ್ಕ ಪಡೆಯಲಿದ್ದಾರೆ.

ಅವರು ಖರೀದಿಸಿದ ಮೊದಲ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್, ಸೆಡಾನ್, ಹ್ಯುಂಡೈ ಕ್ರೆಟಾ (ಎಸ್‌ಯುವಿ) ಕಾರುಗಳನ್ನು ಹೊಂದಿದ್ದಾರೆ.

ಸ್ಮೃತಿ ಮಂಧಾನ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಅದ್ದೂರಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇದರ ಮೌಲ್ಯ ಬಹಿರಂಗಗೊಂಡಿಲ್ಲ.

ರೆಡ್ ಬುಲ್, ಹರ್ಬಲೈಫ್, ಹ್ಯುಂಡೈ, ನೈಕ್, ಜೆಬಿಎಲ್ ಸೇರಿದಂತೆ 15 ಬ್ರ್ಯಾಂಡ್‌ಗಳಿಗೆ ಮಂಧಾನ ಅವರು ಪ್ರಾಯೋಜಕತ್ವ ನೀಡುತ್ತಾರೆ. ಇದರಿಂದಲೂ ಕೋಟಿಗಟ್ಟಲೇ ದುಡಿಯುತ್ತಾರೆ.

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ