ಒಂದೇ ಒಂದು ನದಿ ಹರಿಯದ ವಿಶ್ವದ 5 ದೇಶಗಳಿವು
By Reshma
Oct 06, 2024
Hindustan Times
Kannada
ನೀರಿಲ್ಲದ ಭೂಮಿಯನ್ನು ಊಹಿಸಿಕೊಳ್ಳುವುದು ನಮಗೆ ಕಷ್ಟವಾಗುತ್ತದೆ. ನೀರು ಭೂಮಿಗೆ ಮಾತ್ರವಲ್ಲ ಮನುಷ್ಯನಿಗೂ ಅಷ್ಟೇ ಮುಖ್ಯ
ಭಾರತದಂತಹ ದೇಶದಲ್ಲಿ ಬಹುತೇಕ ಪಾಲು ಕುಡಿಯುವ ನೀರಿಗಾಗಿ ನದಿಗಳನ್ನು ಅವಲಂಬಿಸಲಾಗುತ್ತದೆ. ಪ್ರಪಂಚದ ಮಹಾನ್ ನಾಗರಿಕತೆಗಳು ಭೂಮಿಯ ಮೇಲಿನ ನದಿಗಳ ತಟದಲ್ಲಿ ಅಭಿವೃದ್ಧಿ ಹೊಂದಿದ್ದವು
ಒಂದೇ ಒಂದು ನದಿ ಕೂಡ ಹರಿಯದ ದೇಶಗಳು ಈ ಪ್ರಪಂಚದಲ್ಲಿವೆ ಎಂದರೆ ನಂಬಲೇಬೇಕು . ಅಂತಹ 5 ದೇಶಗಳು ಯಾವುವು ನೋಡಿ
ಸೌದಿ ಅರೇಬಿಯಾ ವಿಶ್ವದ ಭೂಪಟದಲ್ಲಿರುವ ದೇಶಗಳಲ್ಲಿ ಒಂದೇ ಒಂದು ನದಿ ಹೊಂದಿರದ ದೇಶವಾಗಿದೆ. ಇಲ್ಲಿ ಮಳೆಯ ಪ್ರಮಾಣವೂ ಕಡಿಮೆ
ಈ ಕಾರಣದಿಂದಾಗಿ ಸೌದಿ ಅರೇಬಿಯಾದವರು ನೀರಿಗಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಇಲ್ಲಿ ಇಂದಿಗೂ ಜನರು ಬಾವಿಗಳನ್ನು ಬಳಸುತ್ತಾರೆ
ವಿಶ್ವದ ಅತ್ಯಂತ ಚಿಕ್ಕ ನಗರಗಳಲ್ಲಿ ಒಂದಾಗಿರುವ ವ್ಯಾಟಿಕನ್ ಸಿಟಿಯಲ್ಲೂ ನದಿಗಳಿಲ್ಲ. ಇದು ನೀರಿಗಾಗಿ ಇಟಲಿಯನ್ನು ಅವಲಂಬಿಸಿದೆ
ಕತ್ತಾರ್ ಕೂಡ ಒಂದೇ ಒಂದು ನದಿ ಹರಿಯದ ದೇಶ. ಇಲ್ಲಿಯೂ ಸಹ ಡಸಲೀಕರಣ ಘಟಕದ ಮೂಲಕ ನೀರು ಸರಬರಾಜಾಗುತ್ತದೆ
ಈ ದೇಶದಲ್ಲಿ ನದಿಗಳಿಲ್ಲ, ಆದರೆ ಜಲಪಾತಗಳಿವೆ. ಈ ಜಲಪಾತಗಳು ದೇಶದ ಅಗತ್ಯಗಳನ್ನು ಪೂರೈಸಲು ಅಸಮರ್ಪಕವಾಗಿವೆ
ಬೆಹರೈನ್ ದೇಶದ ಕೂಡ ಶೇ 60ಕ್ಕಿಂತ ಹೆಚ್ಚು ಶುದ್ಧ ನೀರು ಒದಗಿಸುವ ಡಸಲೀಕರಣದ ಮೇಲೆ ಹೆಚ್ಚು ಅವಲಂಬಿತವಾಗಿದೆ
ಮಾಲ್ಡಿವ್ಸ್ ಹಿಂದೂ ಮಹಾಸಾಗರದಲ್ಲಿರುವ ಒಂದು ದ್ವೀಪಸಮೂಹ. ಎಲ್ಲಾ ಕಡೆಗಳಿಂದ ಸಮುದ್ರಿಂದ ಸುತ್ತುವರಿದಿರುವ ಈ ದೇಶದಲ್ಲಿ ಕೂಡ ನದಿಗಳು ಹರಿಯುವುದಿಲ್ಲ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ