ಭೂಕಂಪದಂತಹ ಪ್ರಕೃತಿ ವಿಕೋಪವನ್ನ ಮುಂಚಿತವಾಗಿ ಊಹಿಸುವ ಪ್ರಾಣಿಗಳಿವು 

By Reshma
Nov 10, 2024

Hindustan Times
Kannada

ಭೂಕಂಪ, ಪ್ರಳಯ, ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳು ಇದ್ದಕ್ಕಿದ್ದಂತೆ ಸಂಭವಿಸುತ್ತವೆ. ಇದು ಯಾವಾಗ, ಹೇಗೆ ಬರುತ್ತದೆ ಊಹಿಸಲು ಸಾಧ್ಯವಿಲ್ಲ

ಪ್ರಾಕೃತಿಕ ವಿಕೋಪಗಳ ಬಗ್ಗೆ ಮೊದಲೇ ಮಾಹಿತಿ ಸಿಕ್ಕರೆ ಅದನ್ನ ತಪ್ಪಿಸಲು ಅಥವಾ ಇದರಿಂದ ಸುರಕ್ಷಿತವಾಗಿಲು ಒಂದಿಷ್ಟು ಕ್ರಮಗಳನ್ನು ಕೈಗೊಳ್ಳಬಹುದು 

ಮಾನವರು ಪ್ರಾಕೃತಿಕ ವಿಕೋಪಗಳನ್ನು ತಿಳಿದುಕೊಳ್ಳಲು ಹಲವಾರು ಸಂಶೋಧನೆಗಳನ್ನು ಮಾಡುತ್ತಿದ್ದರೂ ಅವರಿಗೆ ಅದನ್ನ ಊಹಿಸಲು ಸಾಧ್ಯವಾಗುತ್ತಿಲ್ಲ 

ಆದರೆ ಕೆಲವು ಪ್ರಾಣಿಗಳು ವಿಕೋಪಗಳನ್ನ ಮುಂಚಿತವಾಗಿ ಊಹಿಸುತ್ತವೆ. ಅಂತಹ ಪ್ರಾಣಿಗಳು ಯಾವುವು ನೋಡಿ 

ನಾಯಿಗಳು, ಬೆಕ್ಕುಗಳು, ಹಾವುಗಳು, ಕಪ್ಪೆಗಳು ಹಾಗೂ ಮೀನುಗಳು ಭೂಕಂಪದಂತಹ ಅನಾಹುತ ಮುಂದಾಗಬಹುದು ಎಂದು ಮೊದಲೇ ಊಹಿಸುತ್ತವೆ ಎಂದು ಸಂಶೋಧನೆಗಳು ತೋರಿಸಿವೆ 

ನಾಯಿ, ಬೆಕ್ಕು ಸೇರಿದಂತೆ ಒಂದಿಷ್ಟು ಪ್ರಾಣಿಗಳು ಕೆಲವು ಸೆಕೆಂಡುಗಳ ಮುಂಚಿತವಾಗಿ ಭೂಕಂಪವನ್ನು ಗ್ರಹಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಭೂಕಂಪ ಸಂಭವಿಸಬಹುದು ಎಂದಾಗ ಅವುಗಳ ವರ್ತನೆ ಬದಲಾಗುತ್ತದೆ 

ಸಾಮಾನ್ಯವಾಗಿ ಭೂಕಂಪಕ್ಕೂ ಮೊದಲು ಭೂಮಿಯೊಳಗೆ ನಡೆಯುವ ಚಲನೆಯು ಸಾಮಾನ್ಯ ಮನುಷ್ಯರಿಗೆ ಕೇಳುವುದಿಲ್ಲ. ಆದರೆ ಪ್ರಾಣಿಗಳು ಅದನ್ನು ಕೇಳಿಸಿಕೊಳ್ಳುವ ಹಾಗೂ ಅನುಭವಿಸುವ ಸಾಮರ್ಥ್ಯವನ್ನು ಹೊಂದಿವೆ 

ವರದಿಗಳ ಪ್ರಕಾರ ನಾಯಿಗಳು, ಬೆಕ್ಕುಗಳು, ಹಾವು, ಕಪ್ಪೆ  ಭೂಮಿಯೊಳಗಿನ ಕಂಪನವನ್ನು ಮುಂಚಿತವಾಗಿ ಗ್ರಹಿಸುತ್ತವೆ 

ಭೂಮಿಯೊಳಗಿನ ಬದಲಾವಣೆ ಗ್ರಹಿಸುವ ಆ ಪ್ರಾಣಿಗಳು ಇದನ್ನು ಯಾರಿಗೂ ವಿವರಿಸಲು ಸಾಧ್ಯವಾಗದೇ ಇದ್ದಾಗ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತವೆ 

ಸಾಮಾನ್ಯವಾಗಿ ಭೂಕಂಪವನ್ನು ಗ್ರಹಿಸಿದ ಪ್ರಾಣಿಗಳ ಮನಸ್ಸು ಚಂಚಲವಾಗುತ್ತದೆ. ಅವು ಅಲ್ಲಿ, ಇಲ್ಲಿ ಓಡಲು ಆರಂಭಿಸುತ್ತವೆ ಅಥವಾ ಅಸಾಮಾನ್ಯ ರೀತಿಯಲ್ಲಿ ವರ್ತಿಸುತ್ತವೆ  

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ