ಇದುವರೆಗೆ ಒಂದೇ ಒಂದು ಮಗು ಜನಿಸದ ಜಗತ್ತಿನ ಪ್ರಸಿದ್ಧ ನಗರವಿದು, ಕಾರಣ ಹೀಗಿದೆ  

By Reshma
Sep 21, 2024

Hindustan Times
Kannada

ಪ್ರಪಂಚದಲ್ಲಿರುವ ಪ್ರತಿ ದೇಶವು ಅದರ ವಿಭಿನ್ನ ಗುಣಲಕ್ಷಣಗಳಿಂದ ಪ್ರಸಿದ್ಧಿಯಾಗುತ್ತದೆ. ಅಂತಹ ಭಿನ್ನ ಪಟ್ಟಣಗಳಲ್ಲಿ ವ್ಯಾಟಿಕನ್ ಸಿಟಿ ಕೂಡ ಒಂದು. ಇದರಲ್ಲಿ ಸಾವಿರಕ್ಕೂ ಕಡಿಮೆ ಜನ ವಾಸಿಸುತ್ತಾರೆ

ಯುರೋಪ್ ಖಂಡದಲ್ಲಿರುವ ವ್ಯಾಟಿಕನ್ ನಗರವು ಇಟಲಿಯ ಗಡಿಯಿಂದ ಸುತ್ತುವರಿದಿದೆ. ಈ ಪಟ್ಟಣದ ಒಟ್ಟು ವಿಸ್ತೀರ್ಣ 44 ಹೆಕ್ಟರ್ ಮತ್ತು ಜನಸಂಖ್ಯೆ ಸುಮಾರು 800 ಆಗಿದೆ 

ವ್ಯಾಟಿಕನ್ ಸಿಟಿಯು ಸಣ್ಣ ಭೂಪ್ರದೇಶದಲ್ಲಿ ಇರುವ ಕಾರಣ, ಇಲ್ಲಿ ಯಾವುದೇ ಆಸ್ಪತ್ರೆಯನ್ನು ನಿರ್ಮಾಣ ಮಾಡಿಲ್ಲವಂತೆ 

ವ್ಯಾಟಿಕನ್ ಸಿಟಿಯಲ್ಲಿರುವ ಜನರು ಯಾವುದೇ ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ರೋಮ್‌ನ ಕ್ಲಿನಿಕ್ ಅಥವಾ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ 

ವ್ಯಾಟಿಕನ್ ನಗರದಲ್ಲಿ ಯಾವುದೇ ಆಸ್ಪತ್ರೆಗಳು ಇಲ್ಲದ ಕಾರಣ ಇಲ್ಲಿಯವರೆಗೆ ಇಲ್ಲಿ ಯಾವುದೇ ಮಗು ಜನಿಸಿಲ್ಲ 

ವರದಿಗಳ ಪ್ರಕಾರ, ವ್ಯಾಟಿಕನ್ ಸಿಟಿಯಲ್ಲಿ ವಾಸಿಸುವ ಮಹಿಳೆಯರು ಗರ್ಭ ಧರಿಸಿದರೆ, ಹೆರಿಗೆಯ ಸಮಯ ಸಮೀಪಿಸಿದಾಗ ಅವಳು ಹತ್ತಿರದಲ್ಲಿರುವ ಬೇರೆ ದೇಶಕ್ಕೆ ಹೋಗಬೇಕಾಗುತ್ತದೆಯಂತೆ 

ಗರ್ಭಿಣಿ ಮಹಿಳೆಯರು ಮಗು ಜನಿಸುವ ತನಕ ನಗರ ಸುತ್ತಮುತ್ತಲಿನ ಸ್ಥಳಗಳಲ್ಲಿ ಇರುತ್ತಾರೆ. ವ್ಯಾಟಿಕನ್ ಸಿಟಿಯಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ 

ವ್ಯಾಟಿಕನ್ ಸಿಟಿಯು ಇಟಲಿಯ ರೋಮ್ ನಗರಕ್ಕೆ ಹತ್ತಿರದಲ್ಲಿದೆ. ಹಾಗಾಗಿ ಬಹುತೇಕರು ಹೆರಿಗೆಯ ಸಮಯ ಹತ್ತಿರ ಬಂದಾಗ ರೋಮ್‌ಗೆ ಹೋಗುತ್ತಾರೆ 

1929, ಫೆಬ್ರುವರಿ 1 ರಂದು ವ್ಯಾಟಿಕನ್ ನಗರವನ್ನು ನಿರ್ಮಾಣ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಪಟ್ಟಣದಲ್ಲಿ ಒಂದೇ ಒಂದು ಮಗು ಜನಿಸಿಲ್ಲ 

ವ್ಯಾಟಿಕನ್ ಸಿಟಿಯ ಇನ್ನೊಂದು ವಿಶೇಷ ಎಂದರೆ ಇಲ್ಲಿ ಯಾರೂ ಶಾಶ್ವತ ಪೌರತ್ವ ಪಡೆಯುವುದಿಲ್ಲ. ಈ ದೇಶದಲ್ಲಿ ವಾಸಿಸುವವರಿಗೆ ಸಮಯದ ಇದೆ. ಅಲ್ಲಿಯವರೆಗೆ ಅವರಿಗೆ ತಾತ್ಕಾಲಿಕ ಪೌರತ್ವ ನೀಡಲಾಗುತ್ತದೆ 

ವಿಜಯಪುರ ಸಮೀಪ ಇರುವ ಗುಡ್ಡಾಪುರ ದಾನಮ್ಮದೇವಿ ಅಲಂಕಾರ