ರೈಲಿಗೆ ರಬ್ಬರ್ ಟೈರ್ ಹಾಕಲ್ಲ ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ

By Reshma
Oct 08, 2024

Hindustan Times
Kannada

ಕಾರು, ಬೈಕು, ಜೀಪು, ಬಸ್‌ ಹೀಗೆ ವಿವಿಧ ರೀತಿಯ ವಾಹನಗಳು ರಸ್ತೆ ಮೇಲೆ ಓಡಾಡುತ್ತವೆ. ಈ ಎಲ್ಲವುಗಳ ಸಾಮಾನ್ಯ ವಿಚಾರ ಎಂದರೆ ಇವುಗಳ ಟೈರ್ ರಬ್ಬರ್‌ನಿಂದ ಮಾಡಿರುವುದು 

ರಸ್ತೆಯಲ್ಲಿ ಓಡಾಡುವ ವಾಹನಗಳೆಲ್ಲವೂ ಗಾಳಿ ತುಂಬಿದ ರಬ್ಬರ್ ಟೈರ್‌ನಿಂದಲೇ ಓಡುತ್ತವೆ, ಆದರೆ ರೈಲಿಗೆ ಮಾತ್ರ ಕಬ್ಬಿಣದ ಚಕ್ರ ಇರುತ್ತದೆ 

ರಬ್ಬರ್ ಟೈರ್ ಪದೇ ಪದೇ ಫಂಕ್ಚರ್ ಆಗುತ್ತದೆ. ಇದನ್ನು ರಿಪೇರಿ ಮಾಡಿಸಲು ಸಮಯ ಹಿಡಿಯತ್ತದೆ. ಆದರೆ ರೈಲಿನ ಚಕ್ರಗಳು ಕಬ್ಬಿಣದಿಂದ ಮಾಡಲ್ಪಡುವ ಕಾರಣ ಅವು ಪಂಕ್ಚರ್ ಆಗುವುದಿಲ್ಲ

ಪಂಕ್ಚರ್ ಆಗುತ್ತೆ ಎನ್ನುವ ಕಾರಣಕ್ಕೆ ಮಾತ್ರವಲ್ಲ ಇನ್ನೂ ಕೆಲವು ಕಾರಣಗಳಿಂದ ರೈಲಿಗೆ ಕಬ್ಬಿಣದ ಟೈರ್ ಜೋಡಿಸಲಾಗುತ್ತದೆ 

ಸೈನ್ಸ್ ಎಬಿಸಿ ವೆಬ್‌ಸೈಟ್ ಪ್ರಕಾರ ಯಾವುದೇ ವಾಹನದ ಟೈರ್‌ನ ವಸ್ತುವು ಅದರ ಚಾಲನೆಯಲ್ಲಿರುವ ಪ್ರದೇಶ, ವೇಗ ಮತ್ತು ಘರ್ಷಣೆಯನ್ನು ಅವಲಂಬಿಸಿದೆ 

ರೈಲಿನ ಎರಡೂ ಚಕ್ರ ಹಾಗೂ ಟ್ರ್ಯಾಕ್‌ಗಳು ಕಬ್ಬಿಣದಿಂದ ಮಾಡಲ್ಪಟ್ಟಿದೆ. ಅಷ್ಟೇ ಅಲ್ಲ ರೈಲು ಹಳಿಗಳು ಸಂಪೂರ್ಣವಾಗಿ ಸಮತಟ್ಟಾಗಿದೆ. ಇದರಲ್ಲಿ ಯಾವುದೇ ಉಬ್ಬು, ತಗ್ಗು ಇರುವುದಿಲ್ಲ

ರೈಲಿನ ರನ್ನಿಂಗ್ ಟ್ರ್ಯಾಕ್ ಸಮತಟ್ಟಾಗಿರುವುದರಿಂದ ಘರ್ಷಣೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ವಾಹನದ ಘರ್ಷಣೆ ಕಡಿಮೆಯಿದ್ದರೆ ವಾಹನವು ಹೆಚ್ಚು ವೇಗದಲ್ಲಿ ಚಲಿಸಬಹುದು 

ರೈಲಿನ ತೂಕ ಇತರ ವಾಹನಗಳಿಗಿಂತ ಹೆಚ್ಚು, ಅಲ್ಲದೇ ಇದು ತುಂಬಾ ದೂರವರೆಗೆ ಪ್ರಯಾಣ ಮಾಡುತ್ತದೆ 

ರೈಲಿನ ತೂಕ ಮತ್ತು ದೂರ ಕ್ರಮಿಸಬೇಕಾದ ಕಾರಣ ರಬ್ಬರ್ ಟೈರ್ ಅಳವಡಿಸಲು ಸಾಧ್ಯವಿಲ್ಲ. ಹೆಚ್ಚಿನ ತೂಕ ಹಾಗೂ ಘರ್ಷಣೆಯು ರಬ್ಬರ್ ಟೈರ್ ಸಿಡಿಯಲು ಕಾರಣವಾಗುತ್ತದೆ 

ಕಾವೇರಿ ವಿರುದ್ಧ ಸಾಕ್ಷಿ ಹೇಳಿದ ವೈಷ್ಣವ್