ಮಗುವಿಗೆ ಜನ್ಮ ನೀಡುವ ಜಗತ್ತಿನ ಏಕೈಕ ಗಂಡುಜೀವಿಯಿದು

By Reshma
Oct 18, 2024

Hindustan Times
Kannada

ಈ ಜಗತ್ತಿನಲ್ಲಿ ಹಲವು ವಿಭಿನ್ನ ಪ್ರಾಣಿ–ಪಕ್ಷಿಗಳಿವೆ. ಈ ಎಲ್ಲ ಜೀವ ಸಂತತಿಗಳಲ್ಲಿ ಹೆಣ್ಣು ಇನ್ನೊಂದು ಜೀವಕ್ಕೆ ಜೀವ ಕೊಡುವವಳು 

ಆದರೆ ಜಗತ್ತಿನ ಏಕೈಕ ಗಂಡು ಜೀವಿಯೊಂದು ಮಗುವಿಗೆ ಜನ್ಮ ನೀಡುತ್ತದೆ ಎಂದರೆ ನೀವು ನಂಬಲೇಬೇಕು

ಜಗತ್ತಿನಲ್ಲಿ ಮಗುವಿನ ಜನ್ಮ ನೀಡುವ ಏಕೈಕ ಜೀವಿ ಎಂದರೆ ಸಮುದ್ರ ಕುದುರೆ. ಇದನ್ನು ಪೈಫ್ ಫಿಶ್, ಸೀ ಡ್ರ್ಯಾಗನ್ ಎಂದೂ ಕರೆಯುತ್ತಾರೆ

ಈ ಜೀವಿಯು ಪ್ರಪಂಚದ ವಿವಿಧ ಸಮುದ್ರಗಳಲ್ಲಿ ಕಂಡುಬರುತ್ತದೆ

ಇದರ ದೇಹ ರಚನೆಯು ವಿಚಿತ್ರವಾಗಿದೆ. ಮಕ್ಕಳನ್ನು ಹೆರುವ ಜವಾಬ್ದಾರಿ ಹೆಣ್ಣಿನಿಂದ ಗಂಡಿನತ್ತ ಹೊರಳಲು ಅದೇ ಕಾರಣ 

ಸಮುದ್ರ ಕುದುರೆ ಸಂತತಿಯಲ್ಲಿ ಹೆಣ್ಣು ಕುದುರೆಯು ಮೊಟ್ಟೆಗಳನ್ನು ಗಂಡು ಕುದುರೆಯ ಹೊಟ್ಟೆಗೆ ವರ್ಗಾಯಿಸುತ್ತದೆ 

ಇದಕ್ಕಾಗಿ ಸಮುದ್ರ ಕುದುರೆಯು ತನ್ನ ಹೊಟ್ಟೆಯಲ್ಲಿ ವಿಶೇಷವಾದ ಚೀಲವೊಂದನ್ನು ಹೊಂದಿದೆ. ಅಲ್ಲಿ ಮೊಟ್ಟೆಗಳನ್ನು ಇಡಬಹುದು 

ಸಮುದ್ರ ಕುದುರೆ ಮೊಟ್ಟೆಗಳು ಹೊರ ಬರಲು ಎರಡರಿಂದ ನಾಲ್ಕು ವಾರಗಳು ಬೇಕಾಗುತ್ತದೆ 

ಸಮುದ್ರ ಕುದುರೆ ಒಂದು ಬಾರಿ 50 ರಿಂದ 1000 ಮರಿಗಳಿಗೆ ಜನ್ಮ ನೀಡುತ್ತದೆ

ವರದಿಯೊಂದರ ಪ್ರಕಾರ ಈ ಹೆರಿಗೆ ನೋವು 12 ಗಂಟೆಗಳ ಕಾಲ ಇರುತ್ತದೆ. ಹುಟ್ಟಿದ ಎರಡು ಮೂರು ವಾರಗಳ ನಂತರ ಮರಿಗಳು ಸಮುದ್ರದಲ್ಲಿ ಈಜಲು ಆರಂಭಿಸುತ್ತವೆ 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ