ಶನಿ ದೇವರಿಗೆ ಪೂಜೆ ಮಾಡುವಾಗ ಪಾಲಿಸಬೇಕಾದ 5 ನಿಯಮಗಳಿವು
By Raghavendra M Y
Nov 06, 2024
Hindustan Times
Kannada
ವಾರದ 7 ದಿನಗಳನ್ನು ಕೆಲವು ದೇವರುಗಳಿಗೆ ಮೀಸಲಿಡಲಾಗಿದೆ. ಶನಿವಾರ ಶನಿ ದೇವರಿಗೆ ಅರ್ಪಿಸಲಾಗಿದೆ
ಶನಿ ದೇವರನ್ನು ಮನಃಪೂರ್ವಕವಾಗಿ ಪೂಜಿಸಿ ಆತನನ್ನು ಮೆಚ್ಚಿಸಿದರೆ ಜೀವನದಲ್ಲಿ ಅನೇಕ ಮಂಗಳಕರ ಫಲಿತಾಂಶಗಳು ಪಡೆಯಬಹುದು
ಶನಿ ದೇವರನ್ನು ಯಾವ ನಿಯಮಗಳಿಂದ ಪೂಜಿಸಬೇಕು ಮತ್ತು ಯಾವ ದೋಷಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿಯಿರಿ
ಶನಿವಾರ ಉಪವಾಸ ಮಾಡಲು ಬಯಸಿದರೆ, ಉಪವಾಸದ ನಂತರ ತಾಮಸಿಕ ಆಹಾರವನ್ನು ಸೇವಿಸಬೇಕು
ಶನಿವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಶನಿ ದೇವರ ಮುಂದೆ ಪೂಜೆ ಮತ್ತು ಉಪವಾಸದ ಪ್ರತಿಜ್ಞೆ ಮಾಡಿ
ನಂತರ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ. ಮನಸ್ಸಿನಲ್ಲಿ ಶನಿ ದೇವರನ್ನು ಧ್ಯಾನಿಸುತ್ತಾ 7 ಬಾರಿ ಪ್ರದಕ್ಷಿಣೆ ಹಾಕಿ
ಶನಿ ದೇವರನ್ನು ಮೆಚ್ಚಿಸಲು ಬಯಸಿದರೆ, ಶನಿ ದೇವರ ಕಬ್ಬಿಣದ ಮೂರ್ತಿಯನ್ನು ಪೂಜಿಸಬೇಕು
ಶನಿವಾರದಂದು ಶನಿಗೆ ಕಪ್ಪು ಎಳ್ಳು, ಸಾಸಿವೆ ಎಣ್ಣೆ, ಕಪ್ಪು ಬಟ್ಟೆಗಳನ್ನು ಅರ್ಪಿಸಿ. ಅಲ್ಲದೆ ಬಟ್ಟೆಗಳನ್ನು ದಾನ ಮಾಡಿದರೆ ಶುಭ ಫಲಗಳಿರುತ್ತವೆ
ಶನಿವಾರ ಉಪವಾಸವನ್ನು ಆಚರಿಸುವವರು ಶನಿ ದೇವರಿಗೆ ಪೂಜೆ ಮಾಡಿದ ನಂತರವೇ ಉಪವಾಸವನ್ನು ಮುಕ್ತಾಯ ಮಾಡಬೇಕು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ