ನಿಮ್ಮ ಮನೆಯಲ್ಲಿ ಶಿವಲಿಂಗವಿದ್ದರೆ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
By Raghavendra M Y
Nov 22, 2024
Hindustan Times
Kannada
ಹಿಂದೂಗಳ ಮನೆಯಲ್ಲಿ ಕೆಲವರು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜಿಸುತ್ತಾರೆ
ಆದರೆ ನಿಮ್ಮ ಮನೆಯಲ್ಲಿ ಶಿವಲಿಂಗವಿದ್ದರೆ ಅದರ ಪೂಜೆಗೆ ಕೆಲವು ವಿಶೇಷ ನಿಯಮಗಳನ್ನು ಪಾಲಿಸಬೇಕಾಗುತ್ತೆ
ಕಾರಣಾಂತರಗಳಿಂದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಬೇಡಿ
ಪ್ರತಿದಿನ ಶಿವಲಿಂಗವನ್ನು ಪೂಜಿಸದಿದ್ದರೆ ಶಿವನ ಕೋಪವನ್ನು ಎದುರಿಸಬೇಕಾಗುತ್ತದೆ. ಅಶುಭ ಫಲತಾಂಶಗಳನ್ನೂ ಕಾಣಬೇಕಾಗುತ್ತದೆ
ಮನೆಯಲ್ಲಿ ಪ್ರತಿಷ್ಠಾಪಿಸುವ ಶಿವಲಿಂಗದ ಉದ್ದವು ನಿಮ್ಮ ಹೆಬ್ಬೆರಳಿಗಿಂತ ದೊಡ್ಡದಾಗಿರಬಾರದು
ಏಕೆಂದರೆ ಶಿವಪುರಾಣದಲ್ಲಿ ಹೆಬ್ಬೆರಳಿಗಿಂತ ದೊಡ್ಡ ಶಿವಲಿಂಗವನ್ನು ಮನೆಯಲ್ಲಿಟ್ಟರೆ ಅಶುಭ ಫಲ ಸಿಗುತ್ತದೆ ಎಂಬ ನಿಯಮವಿದೆ
ದಕ್ಷಿಣ ಅಥವಾ ಪೂರ್ವಕ್ಕೆ ಮುಖ ಮಾಡಿ ಮನೆಯಲ್ಲಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಡಿ. ಉತ್ತರಾಭಿಮುಖವಾಗಿ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ
ಉಕ್ಕಿನ ಪಾತ್ರೆಯಿಂದ ಎಂದಿಗೂ ಶಿವನಿಗೆ ನೀರನ್ನು ಅರ್ಪಿಸಬೇಡಿ. ಯಾವಾಗಲೂ ತಾಮ್ರದ ಪಾತ್ರೆಯಿಂದಲೇ ನೀರನ್ನು ಅರ್ಪಿಸಬೇಕು
ಅಪ್ಪಿ ತಪ್ಪಿಯೂ ಶಿವಲಿಂಗಕ್ಕೆ ತುಳಸಿ ಎಲೆಗಳನ್ನು ಅರ್ಪಿಸಬಾರದು. ಬಿಲ್ವಪತ್ರೆ ಶಿವಲಿಂಗಕ್ಕೆ ತುಂಬಾ ಶ್ರೇಷ್ಠ. ಬಿಲ್ವಪತ್ರೆಯನ್ನು ಅರ್ಪಿಸಿ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ