ಕೃಷ್ಣನಿಗೆ ದಿನಕ್ಕೆ ಎಷ್ಟು ಸಲ ಪೂಜೆ, ನೈವೇದ್ಯ ಮಾಡಿದರೆ ಶ್ರೇಯಸ್ಕರ
By Raghavendra M Y
Dec 02, 2024
Hindustan Times
Kannada
ನಿಮ್ಮ ಮನೆಯಲ್ಲಿ ಲಡ್ಡು ಗೋಪಾಲ ಇದ್ದರೆ ಪೂಜೆ, ನೈವೇದ್ಯ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು
ಲಡ್ಡು ಗೋಪಾಲನಿಗೆ ದಿನಕ್ಕೆ ಎಷ್ಟು ಬಾರಿ ನೈವೇದ್ಯ ಮಾಡುವುದು ಶ್ರೇಯಸ್ಕರ ಎಂಬುದನ್ನು ತಿಳಿಯೋಣ
ದಿನಕ್ಕೆ 4 ಬಾರಿ ಲಡ್ಡು ಗೋಪಾಲನಿಗೆ ನೈವೇದ್ಯ ಮಾಡಬೇಕೆಂಬ ನಿಯಮವಿದೆ
ಕೃಷ್ಣನಿಗೆ ಮೊದಲ ನೈವೇದ್ಯ ಬೆಳಗ್ಗೆ 6 ರಿಂದ 7 ರೊಳಗೆ ಮಾಡಬೇಕು. ಗಂಟೆ ಬಾರಿಸುವ ಇಲ್ಲವೇ ಚಪ್ಪಾಳೆ ತಟ್ಟುವ ಮೂಲಕ ಗೋಪಾಲನನ್ನು ಎಬ್ಬಿಸಬೇಕು
ನಂತರ ಆಹಾರವನ್ನು ಅರ್ಪಿಸಬೇಕು. ಆಹಾರದಲ್ಲಿ ಹಾಲನ್ನು ಬಳಸಬೇಕು
ಎರಡನೇ ಭೋಗ: 2ನೇ ನೈವೇದ್ಯ ಅರ್ಪಿಸುವ ಮುನ್ನ ನೀವು ಸ್ನಾನ ಮಾಡಿರಬೇಕು. ನಂತರ ಲಡ್ಡು ಗೋಪಾಲನಿಗೆ ಸ್ನಾನ ಮಾಡಿಸಬೇಕು. ಬೆಣ್ಣೆ ಮಿಶ್ರಿತ ನೈವೇದ್ಯ ಅರ್ಪಿಸಬೇಕು
3ನೇ ಭೋಗ: ಮಧ್ಯಾಹ್ನ ಕೃಷ್ಣನಿಗೆ ತಾವೇ ತಯಾರಿಸಿದ ಆಹಾರವನ್ನು ನೈವೇದ್ಯವಾಗಿ ಇಡಬೇಕು. ಈ ಆಹಾರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇರಬಾರದು
ನಾಲ್ಕನೇ ಭೋಗ: ಗೋಪಾಲನಿಗೆ ನಾಲ್ಕನೆಯ ನೈವೇದ್ಯವನ್ನು ರಾತ್ರಿ 7 ರಿಂದ 12 ಗಂಟೆಯೊಳಗೆ ಅರ್ಪಿಸಬೇಕು
ಮನೆಯಲ್ಲಿ ಬೆಳ್ಳಿಯ ಪಾತ್ರೆಗಳಿದ್ದರೆ ಅದರಲ್ಲಿ ದೇವರಿಗೆ ಅನ್ನವನ್ನು ಅರ್ಪಿಸಬೇಕು
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ಸ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ