ಶಿವನಿಗೆ ಇಷ್ಟವಾಗುವ ಈ ಹೂಗಳನ್ನು ಅರ್ಪಿಸಿ ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ

Pexel

By Raghavendra M Y
Apr 29, 2024

Hindustan Times
Kannada

ತನ್ನ ಭಕ್ತರ ಪೂಜೆಯಿಂದ ಬೇಗ ಸಂತೋಷ ಪಡುವ ಏಕೈಕ ದೇವರು ಶಿವ. ಆದರೆ ಪೂಜೆ ಸರಿಯಾಗಿ ಮಾಡುವುದು ಅವಶ್ಯಕವಾಗಿದೆ

ಈಶ್ವರನಿಗೆ ಪೂಜೆ ಮಾಡುವಾಗ ಆತನಿಗೆ ಇಷ್ಟವಾಗುವ ಹೂಗಳನ್ನು ಇಡುವುದು ಕೂಡ ಪೂಜೆಯ ಒಂದು ವಿಧಾನವಾಗಿದೆ

ಶಿವನಿಗೆ ಯಾವ ಹೂಗಳು ಇಷ್ಟ ಎಂಬುದು ನಿಮಗೆ ತಿಳಿದಿರಲಿ. ಆ ಹೂಗಳ ಬಗ್ಗೆ ಇಲ್ಲಿದೆ ಮಾಹಿತಿ

ಭೋಲೆನಾಥನಿಗೆ ಕನೇರ್ ಹೂವು ಎಂದರೆ ತುಂಬಾ ಇಷ್ಟ. ಸೋಮವಾರ ಈ ಹೂ ಇಟ್ಟು ಪೂಜೆ ಮಾಡಿದರೆ ಒಳ್ಳೆಯಾದಾಗುತ್ತೆ

ಶಿವನ ಪೂಜೆಯಲ್ಲಿ ಈ ಹೂವು ಇಡುವುದರಿಂದ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ

ಈಶ್ವರನಿಗೆ ಶಮಿ ಹೂವುಗಳು ಮತ್ತು ಬೇಲದ ಹೂವುಗಳ ಇಷ್ಟ ಎಂದು ಹೇಳಲಾಗುತ್ತದೆ

ಶಿವನಿಗೆ ಇಷ್ಟವಾದ ಕೆಂಪು ಎಕ್ಕದ ಗಿಡದ ಹೂವುಗಳನ್ನು ಅರ್ಪಿಸಲಾಗುತ್ತದೆ. ಇವುಗಳನ್ನ ಮದರ್ ಹೂವುಗಳು ಅಂತಲೂ ಕರೆಯಲಾಗುತ್ತೆ

Pexel

ಈಶ್ವರನಿಗೆ ಅಗಸ್ತ್ಯ ಹೂವುಗಳು, ಪಾರಿಜಾತ ಹೂವುಗಳ ಹಾಗೂ ಮಲ್ಲಿಗೆ ಹೂವುಗಳೆಂದರೆ ತುಂಬಾ ಇಷ್ಟ ಎಂದು ನಂಬಲಾಗಿದೆ

Pexel

ಮಲ್ಲಿಗೆ ಹೂಗಳನ್ನಿಟ್ಟು ಶಿವಲಿಂಗವನ್ನು ಪೂಜಿಸಿದರೆ ವ್ಯಕ್ತಿಯ ಜೀವನದಲ್ಲಿ ಧನಾತ್ಮಕ ಶಕ್ತಿ ಬರುತ್ತೆ ಎಂದು ವೇದಗಳಲ್ಲಿ ಹೇಳಲಾಗಿದೆ

ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು, ವಿವಿಧ ಮಾಧ್ಯಮಗಳನ್ನು ಆಧರಿಸಿದೆ. ಯಾವುದೇ ಮಾಹಿತಿ ಸ್ವೀಕರಿಸುವ ಮುನ್ನ ಇದಕ್ಕೆ ಸಂಬಂಧಸಿದ ತಜ್ಞರ ಸಲಹೆಗಳನ್ನು ಪಡೆಯಿರಿ

Pexel

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ