ಹನುಮಾನ್ ಚಾಲೀಸಾ ಪಠಿಸಲು ಒಳ್ಳೆಯ ಸಮಯ, ದಿನ ಯಾವುದು?
By Raghavendra M Y
Sep 25, 2024
Hindustan Times
Kannada
ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಎಲ್ಲಾ ಗ್ರಹಗಳು, ನಕ್ಷತ್ರಗಳಿಂದ ಮಂಗಳಕರ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆ ಇದೆ
ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೋಷದಿಂದಲೂ ಪರಿಹಾರ ಸಿಗುತ್ತೆ ಎಂದು ಹೇಳಲಾಗಿದೆ
ಆದರೆ ಹನುಮಾನ್ ಚಾಲೀಸಾ ಓದುವುದಕ್ಕೆ ಸಂಬಂಧಿಸಿದ ನಿಮಯಗಳಿವೆ. ಅದನ್ನು ಸರಿಯಾದ ರೀತಿಯಲ್ಲಿ ಅನುಸರಿಸಬೇಕು
ಹನುಮಾನ್ ಚಾಲೀಸಾವನ್ನು ಪಠಿಸಲು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿಯೋಣ
ವಾಸ್ತವದಲ್ಲಿ ಆಂಜನೇಯನ ಭಕ್ತರು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ
ಆದರೆ ವಿಶೇಷವಾಗಿ ಮಂಗಳವಾರ ಮತ್ತು ಶನಿವಾರದಂದು ಹನುಮಾನ್ ಚಾಲೀಸವನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ
ಮಂಗಳವಾರ ಹನುಮಂತನಿಗೆ ಸಮರ್ಪಿತವಾಗಿದೆ. ಶನಿವಾರ ಶನಿ ದೇವರ ಆಶೀರ್ವಾದದಿಂದ ಹನುಮಂತನನ್ನು ಪೂಜಿಸಲಾಗುತ್ತೆ
ಸಂಜೆಯ ಸಮಯದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಬಹುದು. ವಿಶೇಷ ಉದ್ದೇಶಕ್ಕಾಗಿ ಚಾಲೀಸಾವನ್ನು ಪಠಿಸಬಹುದು
ಹನುಮಾನ್ ಚಾಲೀಸಾವನ್ನು ರಾತ್ರಿಯಲ್ಲಿ ಪಠಿಸಿದರೆ ಆಂಜನೇಯನ ಕೃಪೆಗೆ ಪಾತ್ರರಾಗುತ್ತೀರಿ ಎಂದು ಹೇಳಲಾಗುತ್ತೆ
ಗಮನಿಸಿ: ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು, ವಿವಿಧ ಮಾಧ್ಯಮಗಳನ್ನ ಆಧರಿಸಿದೆ. ಮಾಹಿತಿ ಸ್ವೀಕರಿಸುವ ಮುನ್ನ ತಜ್ಞರನ್ನು ಸಲಹೆ ಪಡೆಯಿರಿ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ