ಕಾಲ ಭೈರವ ಪೂಜೆಯಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಸಿಗುವ ಶುಭ ಫಲಗಳಿವು

By Raghavendra M Y
Nov 21, 2024

Hindustan Times
Kannada

ಕಾಲ ಭೈರವನನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಹೀಗಾಗಿ ಕಾಲ ಭೈರವನನ್ನು ಶ್ರದ್ಧ ಭಕ್ತಿಯಿಂದ ಪೂಜಿಸಲಾಗುತ್ತೆ

ಕಾಲ ಭೈರವನ ಪೂಜೆಯಲ್ಲಿ ಕೆಲವು ಮಂತ್ರಗಳನ್ನ ಪಠಿಸಲಾಗುತ್ತೆ. ಇವುಗಳನ್ನು ಜಪಿಸಿದರೆ ದೇವರು ಇಷ್ಟ ಸಂತೋಷ ಪಡುತ್ತಾನೆ, ನಿಮ್ಮ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತೆ

ಓಂ ಭಯಹರಣಂ ಚ ಭೈರವಾಯ ನಮಃ ಮಂತ್ರವನ್ನು ಪಠಿಸಬಹುದು. ಈ ಮಂತ್ರ ಯಾವುದೇ ರೀತಿಯ ಭಯವಿದ್ದರೂ ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ

ಈ ಮಂತ್ರವನ್ನು ಪಠಿಸುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ದುಷ್ಟ ಶಕ್ತಿಗಳು ಮನೆಯೊಳಗೆ ಬರುವುದಿಲ್ಲ. ಕುಟುಂಬದಲ್ಲಿ ಯಾವುದೇ ತೊಂದರೆಗಳು ಇರುವುದಿಲ್ಲ

ಎರಡನೇ ಮಂತ್ರ - ಓಂ ಕಾಲಭೈರವಾಯ ನಮಃ. ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ದುಃಖ ಮತ್ತು ಬಡತನ ದೂರವಾಗುತ್ತೆ

ಮೂರನೇ ಮಂತ್ರ - ಓಂ ಬ್ರಹ್ಮ ಕಾಲ ಭೈರವಾಯ ಘಟ್. ಕಾಲ ಭೈರವ ಜಯಂತಿಯಂದು ಈ ಮಂತ್ರವನ್ನು ಪಠಿಸಲಾಗುತ್ತೆ. ಇದು ಪ್ರತಿ ಕೆಲಸದಲ್ಲೂ ಯಶಸ್ಸನ್ನು ತರುತ್ತದೆ

4ನೇ ಮಂತ್ರ - ಓಂ ತಿಕದಂತೆ ಮಹಾಕಾಯ ಕಲ್ಪಾಂತ ದಹನೋಪಮ | ಭೈರವ ನಮಸ್ತುಭ್ಯಂ ಅನುಜ್ಞಾ ದಾತುಮರ್ಹಸಿ | ಈ ಮಂತ್ರ ಪಠಿಸುವುದರಿಂದ ಯಶಸ್ಸು ಸಿಗುತ್ತೆ

5ನೇ ಮಂತ್ರ - ಓಂ ಹ್ರೀಂ ಬಂ ಬಟುಕಾಯ ಮಾಂ ಆಕ್ಷೇಪ ಉದ್ಧರಣ ಯಃ ಕುರು ಕುರು ಬಟುಕಾಯ ಬಾಂ ಹ್ರೀಂ ಓಂ ಫಟ್ ಸ್ವಾಹಾ |

ಗ್ರಹ ದೋಷ - ಭೈರವನ ಪೂಜೆಯಲ್ಲಿ ಈ ಮಂತ್ರವನ್ನು ಪಠಿಸುವುದರಿಂದ ಗ್ರಹದೋಷಗಳು ನಿಮ್ಮನ್ನು ಕಾಡುವುದಿಲ್ಲ. ಶನಿಯ ಸಾಡೇಸಾತಿ ಮತ್ತು ಧೈಯಾ ಪ್ರಭಾವದಲ್ಲಿರುವವರು ಖಂಡಿತವಾಗಿ ಈ ಮಂತ್ರಗಳನ್ನು ಪಠಿಸಬೇಕು

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP