ಚಿನ್ನದ ಪದಕ ವಿಜೇತರಿಗೆ ಎಮ್ಮೆ ಉಡುಗೊರೆ!

By Prasanna Kumar P N
Aug 14, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಆದರೆ ಅವರ ಮಾವ ಎಮ್ಮೆಯೊಂದನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅದಕ್ಕಿಲ್ಲಿದೆ ಕಾರಣ?

ನದೀಮ್ ಅವರ ಮಾವ ಮುಹಮ್ಮದ್ ನವಾಜ್ ಅವರು ಈ ಉಡುಗೊರೆ ನೀಡಿದ್ದು, ಇದು ತಮ್ಮ ಸಂಪ್ರದಾಯ ಎಂದಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹಾಗೆ ಮಾಡುವುದನ್ನು 'ಅತ್ಯಂತ ಮೌಲ್ಯಯುತ' ಮತ್ತು 'ಗೌರವಾನ್ವಿತ' ಎಂದು ಪರಿಗಣಿಸಲಾಗುತ್ತದೆ.

ನದೀಮ್ ಅಪಾರ ಯಶಸ್ಸಿನ ಹೊರತಾಗಿಯೂ ಅವರ ಮನೆ ಇನ್ನೂ ಹಳ್ಳಿಯಲ್ಲೇ ಇದೆ ಎಂದು ಅವರ ಮಾವ ಹೇಳಿದ್ದಾರೆ.

ಪಾಕಿಸ್ತಾನದ ಪಂಜಾಬ್‌ನ ಖನೇವಾಲ್ ಗ್ರಾಮದ ನಿವಾಸಿ ನದೀಮ್ ಒಲಿಂಪಿಕ್ಸ್‌ನಲ್ಲಿ 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದರು.

ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುತ್ತಿದ್ದಂತೆ, ರಾತ್ರೋರಾತ್ರಿ ಸ್ಟಾರ್​ ಆದರು. ಅವರು ಈವರೆಗೂ ಅವರು ಕೋಟಿ ಕೋಟಿ ಬಹುಮಾನ ಪಡೆದಿದ್ದಾರೆ.

ಪಾಕಿಸ್ತಾನ ಟೊಯೊಟಾ ಅವರಿಗೆ 1 ಕೋಟಿ ಬೆಲೆ ಬಾಳುವ ಹೊಸ ಕೊರೊಲ್ಲಾ ಕ್ರಾಸ್ ಹೈಬ್ರಿಡ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದೆ.

ಜನಿವಾರದಲ್ಲಿ ಎಷ್ಟು ಎಳೆಯಿರುತ್ತದೆ?