ಆತ್ಮಹತ್ಯೆಗೆ ಯೋಚಿಸಿದ್ದರಂತೆ ಈ ಹಾಟ್ ಕ್ರೀಡಾಪಟು!

By Prasanna Kumar P N
Sep 17, 2024

Hindustan Times
Kannada

ಏಷ್ಯನ್ ಗೇಮ್ಸ್ ಡಬಲ್ ಪದಕ ವಿಜೇತೆ, ಅಥ್ಲೀಟ್ ಹರ್ಮಿಲನ್ ಬೇನ್ಸ್ ಅವರು ಕ್ರೀಡೆಯ ಹೊರತಾಗಿಯೂ ಮನಮೋಹಕ ಶೈಲಿಯಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ.

ಗಾಯದ ಸಮಸ್ಯೆ ಕಾರಣ ಹರ್ಮಿಲನ್ ಬೇನ್ಸ್ ಪ್ಯಾರಿಸ್ ಒಲಿಂಪಿಕ್ಸ್ ಟೂರ್ನಿಯನ್ನು ತಪ್ಪಿಸಿಕೊಂಡಿದ್ದರು. ಅವರಿಗೆ ಪಾದದ ಗಾಯವಾಗಿತ್ತು.

ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ್ದಕ್ಕೆ ಆಕೆ ತುಂಬಾ ಖಿನ್ನತೆಗೆ ಒಳಗಾಗಿದ್ದರಂತೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರಂತೆ.

ಈ ಬಗ್ಗೆ ಮಾತನಾಡಿದ ಹರ್ಮಿಲನ್, ಪ್ಯಾರಿಸ್ ಒಲಿಂಪಿಕ್ಸ್‌ ಆಡಲು ಬಯಸಿದ್ದೆ. ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೆ. ಆದರೆ ಗಾಯದ ಸಮಸ್ಯೆಗೆ ತುತ್ತಾದೆ ಎಂದು ಹೇಳಿದ್ದಾರೆ.

ಇದು ನನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು. ಇದರಿಂದ ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಆತ್ಮಹತ್ಯೆಯ ಯೋಚನೆಯೂ ನನ್ನ ಮನದಲ್ಲಿ ಮೂಡಿಸಿತ್ತು. ಆಟವನ್ನೇ ಬಿಡಬೇಕೆನಿಸಿತು ಎಂದಿದ್ದಾರೆ.

ಹರ್ಮಿಲನ್ ಪ್ರಸ್ತುತ 'ಗ್ರೇಡ್ 2 ಬಿ' ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಅವರ ಜೀವನವು ಅನಿಶ್ಚಿತವಾಗಿದೆ. ಮತ್ತೆ ಕ್ರೀಡಾಕ್ಷೇತ್ರಕ್ಕೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ವರದಿಗಳ ಪ್ರಕಾರ, ಏಷ್ಯನ್ ಗೇಮ್ಸ್‌ನಲ್ಲಿ 2 ಪದಕಗಳನ್ನು ಗೆದ್ದಿರುವ ಹರ್ಮಿಲನ್ ಈಗ ಮಾಡೆಲಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಹರ್ಮಿಲನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದು, ಮನಮೋಹಕ ಚಿತ್ರಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಫಿಟ್​ನೆಸ್ ವಿಡಿಯೋಗಳನ್ನೇ ಹೆಚ್ಚು ಹಂಚಿಕೊಳ್ಳುತ್ತಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ