ಸೋಷಿಯಲ್ ಮೀಡಿಯಾದಲ್ಲಿ 100 ಕೋಟಿ ಫಾಲೊವರ್ಸ್ ಪಡೆದ ಫುಟ್‌ಬಾಲ್ ತಾರೆ ರೊನಾಲ್ಡೊ
By Jayaraj
Sep 13, 2024
Hindustan Times
Kannada
ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಇತಿಹಾಸ ಸೃಷ್ಟಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಒಂದು ಬಿಲಿಯನ್ ಬೆಂಬಲಿಗರನ್ನು ಪಡೆದ ಮೊದಲಿಗ ಎನಿಸಿಕೊಂಡಿದ್ದಾರೆ.
ಪೋರ್ಚುಗಲ್ ಫುಟ್ಬಾಲ್ ದಂತಕತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಂದು ಬಿಲಿಯನ್ ಫಾಲೊವರ್‌ಗಳನ್ನು ಪಡೆದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ.
ಒಂದು ಬಿಲಿಯನ್ ಎಂದರೆ ಶತಕೋಟಿ ಅಥವಾ ನೂರು ಕೋಟಿ (100,00,00,000).
ಇದರಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ವಿವಿದ ಸೋಷಿಯಲ್ ಮೀಡಿಯಾಗಳು ಸೇರಿವೆ.
ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವ್ಯಕ್ತಿ. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ 'UR. Cristiano' ಅನ್ನು ಆರಂಭಿಸಿದ್ದರು.
ಯೂಟ್ಯೂಬ್ ಚಾನೆಲ್ ಒಂದು ವಾರದೊಳಗೆ 50 ಮಿಲಿಯನ್ ಚಂದಾದಾರರನ್ನು ಪಡೆದಿತ್ತು.
ವೃತ್ತಿಜೀವನದಲ್ಲಿ 900 ಗೋಲುಗಳನ್ನು ಗಳಿಸಿದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೆನ್ನಲ್ಲೇ ರೊನಾಲ್ಡೊ ಈ ದಾಖಲೆ ನಿರ್ಮಿಸಿದ್ದಾರೆ.
ಪ್ರಸ್ತುತ ರೊನಾಲ್ಡೊ ಅಲ್ ನಾಸರ್ ಕ್ಲಬ್ ಪರ ಆಡುತ್ತಿದ್ದಾರೆ.
Al Photo: AFP
ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ