Manu Bhaker Diet: ಚಾಂಪಿಯನ್ ಮನು ಭಾಕರ್ ಆಹಾರಕ್ರಮ ಹೀಗಿರುತ್ತೆ

By Jayaraj
Sep 15, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡೆರಡು ಪದಕ ಗೆದ್ದ ಮನು ಭಾಕರ್ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ.

ಮನು ತಮ್ಮ ಆಹಾರಕ್ರಮದ ವಿಚಾರದಲ್ಲಿ ಪರ್ಫೆಕ್ಟ್. ಕೆಲವು ಪದಾರ್ಥಗಳಿಲ್ಲದೆ ಅವರು ಆಹಾರ ಸೇವಿಸುವುದಿಲ್ಲ.

ಸದಾ ಲವಲವಿಕೆಯಿಂದ ಇರುವ ಮನು; ಹಾಲು, ಮೊಸರು ಮತ್ತು ಬೆಣ್ಣೆಯನ್ನು  ತಿನ್ನುವುದಾಗಿ ಹೇಳಿಕೊಂಡಿದ್ದಾರೆ.

ಹರಿಯಾಣದವರಾದ ಮನು, ರಾಜ್ಯದ ಪ್ರಮುಖ ಆಹಾರಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ.

ಮನು ಆಹಾರಕ್ರಮದಲ್ಲಿ ತುಪ್ಪ ಮತ್ತು ಬೆಣ್ಣೆ ಯಾವಾಗಲೂ ಇರುತ್ತದೆ. ಹಾಲು, ಮೊಸರು ಮತ್ತು ಲಸ್ಸಿ ಇಲ್ಲದೆ ನನ್ನಿಂದ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ಅದಿಲ್ಲದೆ ನನಗೆ ಊಟ ಸೇರುವುದಿಲ್ಲ ಎಂದು‌ ಶೂಟರ್‌ ತಿಳಿಸಿದ್ದಾರೆ.

ಸರಿಯಾಗಿ ಡಯಟ್ ಶೆಡ್ಯೂಲ್ ಅನುಸರಿಸುವ ಮನು, ಫಿಟ್‌ನೆಸ್ ಕಾಪಾಡಿಕೊಳ್ಳಲು ಪ್ರತಿದಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ.

ಫ್ಯಾಷನ್ ಟ್ರೆಂಡ್‌ಗಳನ್ನು ಚೆನ್ನಾಗಿ ಅನುಸರಿಸುವ ಮನು, ಸದಾ ಲವಲವಿಕೆಯಿಂದ ಇದ್ದು ಫಿಟ್‌ನೆಸ್‌ ಹೆಚ್ಚಿಸಿಕೊಳ್ಳುತ್ತಾರೆ.

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?